
ಸುಬ್ರಹ್ಮಣ್ಯ: ಉಡುಪಿಯ ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆಗೆ ಬೈಕ್ ಡಿಕ್ಕಿಯಾಗಿ ಸುಬ್ರಹ್ಮಣ್ಯದ ಯುವಕ ಯುವರಾಜ್ ಸಾವನ್ನಪ್ಪಿದ ಘಟನೆ ಶುಕ್ರವಾರ ನಸುಕಿನ ವೇಳೆ 2:30ರ ಸುಮಾರಿಗೆ ನಡೆದಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಬೈಕ್ ಅತಿ ವೇಗ ಹಾಗೂ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಸವಾರ ಯುವರಾಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಉಚ್ಚಿಲದ ಎಸ್‌ಡಿಪಿಐ ಆಂಬುಲೆನ್ಸ್ ನಲ್ಲಿ ಕೆಎಂ ಸಿರಾಜ್, ಜಲಾಲುದ್ದೀನ್ ಅಜ್ಜರಕಾಡು ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.






