ಸಾಮಾಜಿಕ ಜಾಲತಾಣದಲ್ಲಿ ಬಂದ ಷೇರು ಮಾರುಕಟ್ಟೆ ಸಂಬಂಧಿಸಿದ ಜಾಹಿರಾತು ನಂಬಿ ಯುವಕನೊಬ್ಬ ಬರೋಬ್ಬರಿ 4 ಲಕ್ಷ ಕಳೆದುಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಂತ್ರಸ್ತ ಯುವಕನಿಗೆ ದಿನಾಂಕ 29..02.2025 ರಂದು ಅವರ ಫೇಸ್ ಬುಕ್ ಖಾತೆಯಲ್ಲಿ ಬಂದ Investec Securities India Private Limited ಎಂಬ ಕಂಪೆನಿಯ ಹೆಸರಿನಲ್ಲಿ ಜಾಹಿರಾತು ನೋಡಿ, ಅದನ್ನು ನಂಬಿ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಆಸಕ್ತಿಗೊಂಡು ಅವರು ನೀಡಿದ್ದ ನಂಬರಿಗೆ ವಾಟ್ಸ್ ಅಪ್ ಮೂಲಕ ಸಂಪರ್ಕಿಸಿದ್ದಾನೆ.

ಬಳಿಕ ವಾಟ್ಸಾಪ್ ನಲ್ಲಿ ದಿನಾಂಕ 29..02.2025 ರಿಂದ 12.12.2025ರ ಮಧ್ಯಾವಧಿಯಲ್ಲಿ ಸಂತ್ರಸ್ತ ಯುವಕ ತನ್ನ Union Bank of India SB A/C No ನಿಂದ ಹಂತ ಹಂತವಾಗಿ ಒಟ್ಟು ರೂ. 4,71,000/-ಹಣವನ್ನು ಆರೋಪಿತರು ತಿಳಿಸಿದ ಖಾತೆಗಳಿಗೆ UPI ಹಾಗೂ Mobile Banking ಮೂಲಕ ಹಣವನ್ನು ವರ್ಗಾವಣೆಯನ್ನು ಮಾಡಿದ್ದಾನೆ. ಬಳಿಕ ಸೈಬರ್ ಕಳ್ಳರು ಸಂತ್ರಸ್ತನಿಗೆ ಯಾವುದೇ ಹಣ ನೀಡದ ಕಾರಣ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!