ಬೆಳ್ಳಾರೆ: ವೈದ್ಯರುಗಳ ಶಿಫಾರಸ್ಸು ಮತ್ತು ಅಸಂಖ್ಯಾತ ಜನರ ನಂಬಿಕೆಗೆ ಪಾತ್ರವಾಗಿರುವ ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ನೂತನ ಬೆಳ್ಳಾರೆ ಶಾಖೆ ಜ.26ರಂದು ಸೋಮವಾರ ಬೆಳಗ್ಗೆ 8.15ಕ್ಕೆ ಬೆಳ್ಳಾರೆ ಮುಖ್ಯರಸ್ತೆಯ ಅಮ್ಮು ರೈ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಉದ್ಘಾಟನೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಕು. ಭಾಗೀರಥಿ ಮುರುಳ್ಯ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್. ರೈ, ಅಮ್ಮು ರೈ ಕಾಂಪ್ಲೆಕ್ಸ್ ಮಾಲಕರಾದ ರಾಕೇಶ್ ಶೆಟ್ಟಿ ಹಾಗೂ Rtn ನವೀನ್ ಕುಮಾರ್ ರೈ, ಮುನೀರ್ ಏಜೆನ್ಸಿಯ ಹಾಜಿ ಕೆ. ಮಮ್ಮಾಲಿ, ಬೆಳ್ಳಾರೆ ಟ್ರೇಡರ್ಸ್‌ನ ಮಂಜಪ್ಪ ರೈ, ಕಾಮಧೇನು ಗ್ರೂಪ್‌ನ ಎಂ. ಮಾಧವ ಗೌಡ, ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ. ಆಶಾ ಅಭಿಕರ್, ಬೆಳ್ಳಾರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಡಿ.ಎನ್. ಈರಯ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದಾರೆ.
ಶುಭಾರಂಭದ ಅಂಗವಾಗಿ ಮಧುಮೇಹ, ಹಿಮೋಗ್ಲೋಬಿನ್ ಹಾಗೂ ರಕ್ತದೊತ್ತಡ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುವುದಲ್ಲದೆ, ಎಲ್ಲಾ ರಕ್ತಪರೀಕ್ಷಾ ಪ್ಯಾಕೇಜ್‌ಗಳಿಗೆ ಶೇ.10ರಿಂದ 15ರ ವರೆಗೆ ರಿಯಾಯಿತಿ ನೀಡಲಾಗುತ್ತದೆ.
ಕರ್ನಾಟಕದಲ್ಲೇ ಮೊದಲ ಬಾರಿಗೆ ಬೆಳ್ಳಾರೆಯಲ್ಲಿ ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾದ ವಿಶ್ವದ ಏಕೈಕ 9 ಪಾರ್ಟ್ ಡಬಲ್ ಡಿಫರೆನ್ಸಿಯಲ್ ಸೆಲ್ ESR (CORA ತಂತ್ರಜ್ಞಾನ) ಯಂತ್ರವನ್ನು ಅಳವಡಿಸಲಾಗಿದ್ದು, Complete Blood Count ಹಾಗೂ ESR ಪರೀಕ್ಷೆಯ ವರದಿ ಕೇವಲ ಒಂದು ನಿಮಿಷದಲ್ಲಿ ಲಭ್ಯವಾಗಲಿದೆ. ಕ್ಯಾನ್ಸರ್ ರೋಗಿಗಳ ಮಾದರಿ ಪರೀಕ್ಷೆ, ಮಲೇರಿಯಾ ಮತ್ತು ಡೆಂಗ್ಯೂ ರೋಗಗಳ ತ್ವರಿತ ಪತ್ತೆಗೆ ಇದು ಸಹಕಾರಿಯಾಗಲಿದೆ.
ಇದಲ್ಲದೆ, ಕರ್ನಾಟಕದಲ್ಲಿ ಎರಡನೇಯಾಗಿ ಜಪಾನ್‌ನಿಂದ ಆಮದು ಮಾಡಿದ ಸಂಪೂರ್ಣ ಸ್ವಯಂಚಾಲಿತ Direct CLIA (Chemiluminescence Immunoassay) ಯಂತ್ರವನ್ನು ಇಲ್ಲಿ ಅಳವಡಿಸಲಾಗಿದ್ದು, ಥೈರಾಯ್ಡ್ ಪ್ರೊಫೈಲ್, ವಿಟಮಿನ್ ಡಿ, ವಿಟಮಿನ್ ಬಿ12, ಎಎಂಎಚ್, ಟ್ರೋಪೊನಿನ್-ಐ, ಹಾರ್ಮೋನ್ ಹಾಗೂ ಕ್ಯಾನ್ಸರ್ ಮಾರ್ಕರ್‌ ಸೇರಿದಂತೆ 1086ಕ್ಕೂ ಹೆಚ್ಚು ವಿಧದ ತಪಾಸಣೆಗಳನ್ನು ಇಲ್ಲಿ ನಡೆಸಲಾಗುತ್ತದೆ. 30ಕ್ಕೂ ಹೆಚ್ಚು ರಕ್ತಪರೀಕ್ಷಾ ಪ್ಯಾಕೇಜ್‌ಗಳು ಲಭ್ಯವಿವೆ.
ಆಹಾರ ಮತ್ತು ಪರಿಸರ ಅಲರ್ಜಿಗಳ ಪತ್ತೆಗೆ ಐಜಿಜಿ ಹಾಗೂ ಐಜಿಇ ಪ್ರೊಫೈಲ್ ಪರೀಕ್ಷೆಗಳ ಮೂಲಕ ಒಂದೇ ರಕ್ತ ಪರೀಕ್ಷೆಯಲ್ಲಿ 300ಕ್ಕೂ ಹೆಚ್ಚು ಅಲರ್ಜಿಕ್ ಅಂಶಗಳ ನಿಖರ ವರದಿ ಪಡೆಯುವ ಸೌಲಭ್ಯವೂ ಇದೆ.
ಮನೆಬಾಗಿಲಿನಿಂದಲೇ ರಕ್ತದ ಮಾದರಿ ಸಂಗ್ರಹಿಸುವ ವಿನೂತನ ಸೇವೆಯನ್ನೂ ಲ್ಯಾಬೋರೇಟರಿ ಆರಂಭಿಸಿದ್ದು, ಗ್ರಾಮೀಣ ಜನತೆಗೆ ಇದು ಬಹುಪಯೋಗಿಯಾಗಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಚೇತನ್ ಪ್ರಕಾಶ್ ಕಜೆ ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!