ಪುತ್ತೂರು: ಪುತ್ತೂರು ಆಸ್ಪತ್ರೆಗಳ ಒಕ್ಕೂಟದ ವತಿಯಿಂದ ಫೆಬ್ರವರಿ 7 ಮತ್ತು 8ರಂದು ತೆಂಕಿಲದ ವಿವೇಕಾನಂದ ಶಾಲಾ ಮೈದಾನದಲ್ಲಿ ನಡೆದ ಎರಡು ದಿನಗಳ ಕ್ರೀಡಾಕೂಟದಲ್ಲಿ ವಿವಿಧ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆದರು.
ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟಗಳಲ್ಲಿ ಪುತ್ತೂರು ಸಿಟಿ ಆಸ್ಪತ್ರೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ದ್ವಿತೀಯ ಸ್ಥಾನ ಗಳಿಸಿದೆ. ಪುರುಷರ ಹಗ್ಗಜಗ್ಗಾಟದಲ್ಲಿ ಆದರ್ಶ ಆಸ್ಪತ್ರೆ ಪ್ರಥಮ ಸ್ಥಾನ ಪಡೆದರೆ, ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಮುನ್ನಡೆ ಸಾಧಿಸಿದೆ.
ಕ್ರೀಡಾಕೂಟವನ್ನು ವಿವೇಕಾನಂದ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಉದ್ಘಾಟಿಸಿದರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಫೆಬ್ರವರಿ 8ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಭಾಸ್ಕರ್ ಎಸ್. ಅಧ್ಯಕ್ಷತೆ ವಹಿಸಿದರು. ಡಾ. ಶ್ರೀಪತಿ ರಾವ್, ಡಾ. ಎಸ್.ಎಸ್. ಜೋಶಿ, ಡಾ. ಪ್ರಶಾಂತ್ ಜಾನ, ಡಾ. ಎಂ.ಎಸ್. ಶೆಣೈ ಮತ್ತು ಡಾ. ಎಸ್.ಎಂ. ಪ್ರಸಾದ್ ವಿಜೇತರಿಗೆ ಬಹುಮಾನ ವಿತರಿಸಿದರು. ಡಾ. ಸಾಯಿಪ್ರಕಾಶ್, ಡಾ. ನಿರಪಮ, ಹರೀಶ ಮತ್ತು ರವಿ ಕಾರ್ಯಕ್ರಮ ನಿರ್ವಹಿಸಿದರು.
ಕ್ರೀಡಾಕೂಟದಲ್ಲಿ ಯತೀಶ್, ಜ್ಯೋತಿ, ಗೋಪಿನಾಥ್, ಪ್ರಜ್ವಲ್, ನಿಪೇಕ್ಷ ಕಲ್ಲಾರೆ, ಪುಷ್ಪ ಬನ್ನೂರು, ಶ್ರವಣ್ ಬನ್ನೂರು ಮತ್ತು ತ್ರಿಶೂಲ್ ರಾಜ್ ಬನ್ನೂರು ತೀರ್ಪುಗಾರರಾಗಿ ಸಹಕರಿಸಿದರು. ಧನುಷ್ ವೀಕ್ಷಕ ವಿವರಣೆ ನೀಡಿದರು.
ಫಲಿತಾಂಶಗಳು:
ಪುರುಷರ ಓವರ್‌ಆರ್ಮ್ ಕ್ರಿಕೆಟ್‌ನಲ್ಲಿ ಪುತ್ತೂರು ಸಿಟಿ ಆಸ್ಪತ್ರೆ ಪ್ರಥಮ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ದ್ವಿತೀಯ. ಮಹಿಳೆಯರ ತ್ರೋಬಾಲ್‌ನಲ್ಲಿ ಪುತ್ತೂರು ಸಿಟಿ ಆಸ್ಪತ್ರೆ ಪ್ರಥಮ, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ದ್ವಿತೀಯ. ಪುರುಷರ ಹಗ್ಗಜಗ್ಗಾಟದಲ್ಲಿ ಆದರ್ಶ ಆಸ್ಪತ್ರೆ ಪ್ರಥಮ, ಪ್ರಗತಿ ಆಸ್ಪತ್ರೆ ದ್ವಿತೀಯ. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಗತಿ ಆಸ್ಪತ್ರೆ ಪ್ರಥಮ, ವೈದ್ಯರ್ಸ್ ಆಸ್ಪತ್ರೆ ದ್ವಿತೀಯ ಸ್ಥಾನ ಪಡೆದವು.
ನಿಂಬೆ ಹಣ್ಣಿನ ಜೊತೆ ಓಟದಲ್ಲಿ ಸರಕಾರಿ ಆಸ್ಪತ್ರೆಯ ಶಾಲಿನಿ ಪ್ರಥಮ, ಯಶ್ಚಿತ ದ್ವಿತೀಯ. 40 ವರ್ಷ ಮೇಲ್ಪಟ್ಟ ಪುರುಷರ ವೇಗದ ನಡಿಗೆಯಲ್ಲಿ ದಿನೇಶ್ ಪ್ರಥಮ, ಲಕ್ಷ್ಮೀಶ ದ್ವಿತೀಯ. ಮಹಿಳೆಯರ ವೇಗದ ನಡಿಗೆಯಲ್ಲಿ ಸುನಿತಾ ಪಿಂಟೊ ಪ್ರಥಮ, ಚಂದ್ರಿಕಾ ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ 100 ಮೀಟರ್ ಓಟದಲ್ಲಿ ಹಿತ ಪ್ರಥಮ, ಅನು ದ್ವಿತೀಯ. ಪುರುಷರ 100 ಮೀಟರ್ ಓಟದಲ್ಲಿ ಭುವನ್ ಪ್ರಥಮ, ಪುಷ್ಪರಾಜ್ ದ್ವಿತೀಯ. ಗೂಟಕ್ಕೆ ಗುರಿಯಸೆತದಲ್ಲಿ ಪುಷ್ಪರಾಜ್ ಪ್ರಥಮ ಸ್ಥಾನ ಪಡೆದರು

Leave a Reply

Your email address will not be published. Required fields are marked *

Join WhatsApp Group
error: Content is protected !!