ಪುತ್ತೂರು: ವೈದ್ಯಕೀಯ ತಜ್ಞ ಡಾ. ನಝೀರ್ ಅಹಮ್ಮದ್ ಅವರ ಡಯಾಬಿಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಫೆ.11ರಂದು ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿರುವ ಡಾ. ನಝೀರ್ ಅಹಮ್ಮದ್ ಅವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ಶಿಬಿರದಲ್ಲಿ ಥೈರಾಯಿಡ್ ಗ್ರಂಥಿ ತಪಾಸಣೆ, ಶುಗರ್ (GRBS), HBA1C, ಬಿ.ಎಂ.ಡಿ ಹಾಗೂ ನ್ಯೂರೋಪಥಿ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಯಿತು. ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪು ಶಕ್ತಿ ಕುಂದುವುದು, ಏಕಾಗ್ರತೆಯಲ್ಲಿ ತೊಂದರೆ, ತೂಕ ಏರಿಕೆ ಅಥವಾ ಇಳಿಕೆ, ಮಹಿಳೆಯರಲ್ಲಿ ಅಸಮಂಜಸ ಮಾಸಿಕ ಸ್ರಾವ, ಗಂಟಲಿನಲ್ಲಿ ಊತ, ಅಧಿಕ ಎದೆ ಬಡಿತ ಮತ್ತು ರಕ್ತದೊತ್ತಡ ಸಮಸ್ಯೆ ಹೊಂದಿರುವವರು ತಪಾಸಣೆಗೊಳಗಾಗಿ ವೈದ್ಯರ ಸಲಹೆ ಪಡೆದರು.
ಡಾ. ನಝೀರ್ ಅಹಮ್ಮದ್ ಮಾತನಾಡಿ, ಪ್ರತಿವರ್ಷ ಕ್ಲಿನಿಕ್‌ನಲ್ಲಿ ವಿವಿಧ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ವರ್ಷವೂ ರೋಟರಿ ಕ್ಲಬ್ ಹಾಗೂ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಮತ್ತು ವಿವಿಧ ಕಂಪೆನಿಗಳ ಸಹಕಾರದಿಂದ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಸಾರ್ವಜನಿಕರು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ., ಸದಸ್ಯ ಲೋವಲ್ ಮೇವಾಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಂಟಾಸ್ ಕಂಪೆನಿಯ ಚರಣ್ ಮತ್ತು ವಿನಯ್, ಮ್ಯಾನ್‌ಕೈಂಡ್ ಫಾರ್ಮಾದ ತೌಸೀಫ್, ಮೈಕ್ರೋಲ್ಯಾಬ್ ಸಂಸ್ಥೆಯ ಪ್ರಶಾಂತ್, ಮೆಕ್ಲಾಯಿಡ್ಸ್ ಸಂಸ್ಥೆಯ ವರುಣ್, ಲಿನಕ್ಸ್ ಸಂಸ್ಥೆಯ ಕೃಷ್ಣ, ಟೊರೆಂಟ್ ಕಂಪೆನಿಯ ವಿಶ್ವ ಹಾಗೂ ಡಾ. ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್ ಸಿಬ್ಬಂದಿ ಸಹಕರಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!