
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ಇದರ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವಾರ್ಷಿಕ ವಿಶೇಷ ಶಿಬಿರ 2025–26 “ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ – ನನ್ನ ಭಾರತಕ್ಕಾಗಿ ಯುವಜನತೆ” ಎಂಬ ಧ್ಯೇಯವಾಕ್ಯದಡಿ ಫೆ. 3ರಿಂದ 9ರವರೆಗೆ ಅರಿಯಡ್ಕದ ಪಾಪೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಶಿಬಿರದ ಸಮಾರೋಪ ಸಮಾರಂಭ ಫೆ. 9ರಂದು ಜರುಗಿತು.
ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಸಂಚಾಲಕರಾದ ಅತಿ ವಂದನೀಯ ಲಾರೆನ್ಸ್ ಮಸ್ಕರೇನಸ್, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ., ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಮೊಳೆಯಾರ್, ಮೀನಾಕ್ಷಿ ಪಾಪೆಮಜಲು, ಶ್ರೀಧರ ಪೂಜಾರಿ, ಸಚಿನ್ ಪಾಪೆಮಜಲು, ಮಲ್ಲಿಕಾ ಜೆ. ರೈ, ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು, ಶಶಿಕಲಾ, ಪ್ರವೀಣಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮಾರೋಪ ಭಾಷಣದಲ್ಲಿ ಡಾ. ಶೇಷಪ್ಪ ಕೆ. ಅವರು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ, ಅದರ ಉಪಯೋಗ ಮತ್ತು ಶಿಬಿರದಿಂದ ಸ್ವಯಂಸೇವಕರು ಅಳವಡಿಸಿಕೊಳ್ಳಬೇಕಾದ ಮೌಲ್ಯಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಿತನುಡಿಗಳ ಮೂಲಕ ಶಿಬಿರಾರ್ಥಿಗಳಿಗೆ ಶುಭಾಶಯ ಕೋರಿದರು.
ಶಿಬಿರದಲ್ಲಿ ವಿಶೇಷ ಸಾಧನೆಗೈದ ಸ್ವಯಂಸೇವಕರನ್ನು ಗೌರವಿಸಲಾಯಿತು. ವಿವಿಧ ಶೈಕ್ಷಣಿಕ ಸ್ಪರ್ಧೆಗಳ ವಿಜೇತರಿಗೆ ಹಾಗೂ ಉತ್ತಮ ವರದಿ ಬರವಣಿಗೆಗೆ ಬಹುಮಾನ ವಿತರಿಸಲಾಯಿತು. ವರದಿ ಬರವಣಿಗೆಯಲ್ಲಿ ದ್ವಿತಿ, ಸ್ಪಂದನ, ಕೀರ್ತನಾ ಮತ್ತು ಅಶ್ವಿನಿ ಪ್ರಶಸ್ತಿ ಪಡೆದರು. ದಾನಿಗಳು ಹಾಗೂ ಅತಿಥಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಎನ್‌ಎಸ್‌ಎಸ್ ಘಟಕದ ವತಿಯಿಂದ ಪಾಪೆಮಜಲು ಸರಕಾರಿ ಪ್ರೌಢಶಾಲೆಗೆ ನೆನಪಿನ ಕಾಣಿಕೆಯಾಗಿಯಾಗಿ ಕುರ್ಚಿಗಳನ್ನು ಹಸ್ತಾಂತರಿಸಲಾಯಿತು. ಸಂಚಾಲಕ ಲಾರೆನ್ಸ್ ಮಸ್ಕರೇನಸ್ ಅವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಶಿಬಿರದ ವರದಿಯನ್ನು ಗೀತಾ ಕೆ.ಬಿ. ಮತ್ತು ರತನ್ ವಾಚಿಸಿದರು. ಅಪರ್ಣ ಎಸ್., ಸುಷ್ಮಾ, ರಿಷಿಕಾ, ಮನೀಷ್ ಮತ್ತು ಆಕಾಶ್ ರೈ ತಮ್ಮ ಅನುಭವ ಹಂಚಿಕೊಂಡರು. ವಿಶೇಷ ಸಾಧನೆ ವರದಿಯನ್ನು ಅಶ್ವಿನಿ ವಾಚಿಸಿದರೆ, ಬಹುಮಾನ ಪಟ್ಟಿ ವಿಷ್ಣುಜೀತ್ ಮಂಡಿಸಿದರು. ಕಾರ್ಯಕ್ರಮವನ್ನು ಸ್ಪಂದನಾ ನಿರೂಪಿಸಿದರು.
ಸ್ವಾಗತ ಹಾಗೂ ಧನ್ಯವಾದಗಳನ್ನು ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಪುಷ್ಪ ಎನ್. ಮತ್ತು ಡಾ. ಕೆ. ಚಂದ್ರಶೇಖರ್ ಸಲ್ಲಿಸಿದರು.







