ಪುತ್ತೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಹಾಗು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪುತ್ತೂರು ಇದರ ಇತಿಹಾಸ ವಿಭಾಗ, ಐಕ್ಯೂಎಸಿ ಸಹಯೋಗದೊಂದಿಗೆ ಪ್ರಾದೇಶಿಕ ಅಧ್ಯಯನಗಳ ಕುರಿತಾಗಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ದೃಷ್ಟಿಯಿಂದ ದೇಶ ಪ್ರೇಮ ಪೂರಿತ ವೈಚಾರಿಕತೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ ಅಬ್ಬಕ್ಕಳ ಸಾಧನೆಗಳನ್ನು ರಾಷ್ಟ್ರ ವ್ಯಾಪ್ತಿಗೊಳಿಸುವ ನಿಟ್ಟಿನಲ್ಲಿ ‘ಅಬ್ಬಕ್ಕ @500’ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕಾರ್ಯಕ್ರಮದ 100ರ ಸಂಭ್ರಮದ ಅಂಗವಾಗಿ ಪುತ್ತೂರಿನ 6 ಮಂದಿ ಸಹಿತ 21 ಮಂದಿ ಸಾಧಕ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಗೌರವ ಪುರಸ್ಕಾರ ಕಾರ್ಯಕ್ರಮವು ಫೆ. 16ರಂದು ಪುತ್ತೂರು ವಿವೇಕಾನಂದ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಬೆಳಿಗ್ಗೆ ಕಾರ್ಯಕ್ರಮದ ಉದ್ಘಾಟನೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವೀರ ಸಾವರ್ಕರ್ ಸಭಾಭವನದಲ್ಲಿ ನಡೆಯಲಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ. ಕೆ.ಪ್ರಭಾಕರ ಭಟ್ ಕಲ್ಲಡ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ। ಬ್ರಿಜೇಶ್ ಚೌಟ, ಮೂಡಬಿದ್ರೆ ಚೌಟರ ಅರಮನೆಯ ಕುಲದೀಪ್ ಎಂ ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎ.ಬಿ.ಆ‌ರ್.ಎಸ್.ಎಂ ನವದೆಹಲಿಯ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಗುಂಟ ಲಕ್ಷ್ಮಣ್, ದೆಹಲಿಯ ಎ.ಬಿ.ಆರ್.ಎಸ್.ಎಮ್‌ನ ಜಂಟಿ ಕಾರ್ಯದರ್ಶಿ ಡಾ. ಆಶೀಮ ಮಂಗ್ಲಾ ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಅವರು ಗೌರವ ಉಪಸ್ಥಿತಿಯಲ್ಲಿರುತ್ತಾರೆ ಎಂದು ಅವರು ಹೇಳಿದರು.

ಪುತ್ತೂರಿನ 6 ಮಂದಿ ಸಹಿತ 21 ಮಂದಿಗೆ ವೀರರಾಣಿ ಅಬ್ಬಕ್ಕ ಗೌರವ ಪುರಸ್ಕಾರ:

ಸಾಧಕ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ ನಡೆಯಲಿದ್ದು, ಮಹಿಳಾ ಸಬಲೀಕರಣದಲ್ಲಿ ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಜನರಲ್ ಸುರೇಖಾ ಶೆಟ್ಟಿ, ದೈವಾರಾಧನೆಯಲ್ಲಿ ಪೆರುವಾಯಿಯ ಸುಂದರಿ ನಲಿಕೆ, ಸಮಾಜ ಸೇವೆ- ಸಂಘಟನೆಯಲ್ಲಿ ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್‌ನ ಡಾ. ಆಶಾ ಜ್ಯೋತಿ ರೈ, ಬಾಲ ಸಂಸ್ಕಾರ ಶಿಕ್ಷಣದಲ್ಲಿ ಮಂಗಳೂರು ತುಲುವೆರೆ ಕಲ ಇದರ ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಉದ್ಯಮಶೀಲತೆಯಲ್ಲಿ ದಾರಂದಕುಕ್ಕು ಮಂಗಳಾ ಎಂಟರ್‌ಪ್ರೈಸಸ್‌ನ ಮಹಾಲಕ್ಷ್ಮೀ, ಪ್ರಕೃತಿ ಚಿಕಿತ್ಸೆ ಮತ್ತು ಸಮಗ್ರ ಸ್ವಾಸ್ತ್ರದಲ್ಲಿ ಮೂಡಬಿದ್ರೆ ಆಳ್ವಾಸ್ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಆಂಬುಲೆನ್ಸ್ ಚಾಲಕಿ ಮಂಗಳೂರು ಕಾವೇರಿ ಅಂಬ್ಯುಲೆನ್ಸ್‌ ಸರ್ವೀಸ್‌ನ ಮಾಲಕಿ ಸಿ.ಎಸ್ ರಾಧಿಕಾ, ರುದ್ರಭೂಮಿ ಸೇವೆಯಲ್ಲಿ ಉಡುಪಿಯ ಬೀಡಿನಗುಡ್ಡೆ ವನಜಾ ಪೂಜಾರ್ತಿ, ನಾಟಿ ವೈದ್ಯ ಕ್ಷೇತ್ರದಲ್ಲಿ ವಿರಾಜಪೇಟೆಯ ಸೂಲಗಿತ್ತಿ ಮತ್ತು ನಾಟಿವೈದ್ಯೆ ಕೆ.ಬಿ.ಅಮ್ಮಣ್ಣಿ ಭಾರತೀಯ ಕಲೆಗಳ ಕ್ಷೇತ್ರದಲ್ಲಿ ನಾಟ್ಯಾರಾಧನಾ ಮತ್ತು ಯಕ್ಷರಾಧನಾ ಕಲಾಕೇಂದ್ರ ಮಂಗಳೂರು ಇದರ ನಿರ್ದೇಶಕಿ ವಿದುಷಿ ಸುಮಂಗಲ ರತ್ನಾಕರ್ ರಾವ್, ತುಳು ಸಾಹಿತ್ಯ ಸಂಘಟನೆಯಲ್ಲಿ ತುಳುನಾಡ ಧ್ವನಿ ಅಂತರ್ಜಾಲ ಪತ್ರಿಕೆಯ ಪ್ರವರ್ತಕಿ ಯಶೋದ ಕೇಶವ್, ಯಕ್ಷಗಾನ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಬೆಳುವಾಯಿ ಮೂಡಬಿದಿರೆಯ ಶುಭಾಶಯ ಜೈನ್, ಯಕ್ಷಗಾನದಲ್ಲಿ ಯಕ್ಷಗುರು ಮಂಗಳೂರು ಇದರ ಪೂರ್ಣಿಮಾಯತೀಶ್ ರೈ, ಪರಿಸರದಲ್ಲಿ ಮೂಡಬಿದಿರೆ ಜೈನ ಪ.ಪೂ ಕಾಲೇಜಿನ ಉಪನ್ಯಾಸಕಿ ಸಂಧ್ಯಾ, ತಾಳಮದ್ದಳೆ ಕ್ಷೇತ್ರದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಮಂಡಳಿಯಲ್ಲಿ ಅರ್ಥಧಾರಿಯಾಗಿರುವ ಶುಭಾ ಅಡಿಗ, ಆಯುರ್ವೇದ ಕ್ಷೇತ್ರದಲ್ಲಿ ಎಸ್.ಡಿ.ಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್‌ನ ಆಡಳಿತ ಪಾಲುದಾರೆ ರೂಪಲೇಖಾ, ಸಮುದಾಯ ಅಭಿವೃದ್ಧಿಯಲ್ಲಿ ಬಂಟ್ವಾಳ ಅನಂತಾಡಿಯ ಶೈನ್ ಇಂಡಿಯಾ ಟ್ರಸ್ಟ್‌ನ ಸಂಸ್ಥಾಪಕಿ ಭವ್ಯರಾಣಿ ಪಿ.ಸಿ, ಭರತನಾಟ್ಯ ಕ್ಷೇತ್ರದಲ್ಲಿ ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯ ನಿರ್ದೇಶಕಿ ಶಾಲಿನಿ ಆತ್ಮಭೂಷಣ್‌, ಉದಯೋನ್ಮುಖ ಭರತನಾಟ್ಯ ಕಲಾವಿದೆ ಮಂಗಳೂರಿನ ಶ್ರಾವ್ಯ ಯು, ಪತ್ರಿಕೋದ್ಯಮ ವಿಭಾಗದಲ್ಲಿ ವಿಕ್ರಮ ಟಿವಿ ನಿರೂಪಕಿ ಶಹನಾ ಮುಲ್ತಾಜ್ ನೆಲ್ಯಡ್ಕ, ಯೋಗ ಮತ್ತು ಧ್ಯಾನ ಕ್ಷೇತ್ರದಲ್ಲಿ ಮಂಗಳೂರು ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕಿ ಕೆ.ಎನ್.ದೀಪಿಕಾ ಅವರನ್ನು ವೀರರಾಣಿ ಅಬ್ಬಕ್ಕ ಗೌರವ ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು ಎಂದು ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಹೇಳಿದರು.

ಸಮಾರೋಪ ಸಮಾರಂಭ:

ಮಧ್ಯಾಹ್ನ ಗಂಟೆ 2 ರಿಂದ ಸಮಾರೋಪ ಸಮಾರಂಭದಲ್ಲಿ ಎ.ಬಿ.ಆರ್.ಎಸ್.ಎಂ ನವದೆಹಲಿಯ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಗುಂಟ ಲಕ್ಷ್ಮಣ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೂಡಬಿದಿರೆ ಜವನೆರ್ ಬೆದ್ರ ಇದರ ಸಂಸ್ಥಾಪಕ ಅಮರ್‌ ಕೋಟೆ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎದು ಪ್ರೋ ಶ್ರೀಕೃಷ್ಣ ಗಣರಾಜ್ ಭಟ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!