
ಸುಳ್ಯ: ಮನೆಯಲ್ಲಿ ತಂದೆ–ತಾಯಿ ಮಾತ್ರ ಇದ್ದ ವೇಳೆ ಮನೆಯ ಆವರಣಕ್ಕೆ ನುಗ್ಗಿ ಕಾರಿನ ಗಾಜು ಒಡೆದು ಹಾನಿ ಮಾಡಿದ ಆರೋಪದಲ್ಲಿ ಮೆಸ್ಕಾಂ ಸಿಬ್ಬಂದಿಯೊಬ್ಬರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ ನಿವಾಸಿ ಬಾಲಚಂದ್ರ (40) ಅವರ ದೂರಿನಂತೆ, ಫೆ.20ರಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಪಿರ್ಯಾದಿದಾರರ ಜಾಗದ ಗೇಟ್ ತೆರೆಯುವ ಮೂಲಕ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬರು ಅಲ್ಲಿದ್ದ ಕಾರಿನ ಗಾಜನ್ನು ಹೆಲ್ಮೆಟ್‌ನಿಂದ ಹೊಡೆದು ಹಾನಿ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಾನಿಗೊಳಗಾದ ಗಾಜಿನ ಮೌಲ್ಯವು ರೂ.5,000 ಎಂದು ತಿಳಿಸಲಾಗಿದೆ.
ಘಟನೆಯ ಕುರಿತು ಪಿರ್ಯಾದಿದಾರರ ತಂದೆ–ತಾಯಿ ಪ್ರಶ್ನಿಸಿದಾಗ ಆರೋಪಿತನು ಯಾವುದೇ ಮಾಹಿತಿ ನೀಡದೆ ತೆರಳಿದ್ದಾನೆ ಎನ್ನಲಾಗಿದೆ. ಬಳಿಕ ವಿಚಾರಣೆ ನಡೆಸಿದಾಗ, ಆರೋಪಿ ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಪ್ರೀತ್ ಎಂದು ತಿಳಿದುಬಂದಿದೆ.
ಈ ಕುರಿತು ಫೆ.21ರಂದು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ.25/2026 ಕಲಂ 324(1), 329(3), 352 ಬಿಎನ್‌ಎಸ್ 2023ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.







