
ಮಂಗಳೂರು: ಇಸ್ರೇಲ್–ಇರಾನ್ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ಸಂಚರಿಸುವ ಕೆಲವು ವಿಮಾನಗಳ ಸಂಚಾರವನ್ನು ಮಾ. 4ರವರೆಗೆ ರದ್ದುಗೊಳಿಸಲಾಗಿದೆ.
ವಿಮಾನ ನಿಲ್ದಾಣದ ವಕ್ತಾರರ ಪ್ರಕಾರ, ಮಾ. 3ರಂದು ಮಂಗಳೂರು–ದೋಹಾ (ಐಎಕ್ಸ್ 821), ದೋಹಾ–ಮಂಗಳೂರು (ಐಎಕ್ಸ್ 822), ಮಂಗಳೂರು–ದುಬೈ (ಐಎಕ್ಸ್ 813), ಮಂಗಳೂರು–ಕುವೈಟ್ (ಐಎಕ್ಸ್ 851), ಮಂಗಳೂರು–ದಮ್ಮಾಮ್ (ಐಎಕ್ಸ್ 847) ಹಾಗೂ ಮಂಗಳೂರು–ಅಬುಧಾಬಿ (ಐಎಕ್ಸ್ 816) ವಿಮಾನಗಳ ಸಂಚಾರ ರದ್ದಾಗಿದೆ.
ಅದೇ ರೀತಿ ಮಾ. 4ರಂದು ದುಬೈ–ಮಂಗಳೂರು (ಐಎಕ್ಸ್ 814), ಕುವೈಟ್–ಮಂಗಳೂರು (ಐಎಕ್ಸ್ 852), ದಮ್ಮಾಮ್–ಮಂಗಳೂರು (ಐಎಕ್ಸ್ 848) ಮತ್ತು ಅಬುಧಾಬಿ–ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರವೂ ರದ್ದಾಗಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಯಾಣಿಕರು ಸಂಬಂಧಿತ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯುವಂತೆ ಸೂಚಿಸಲಾಗಿದೆ.







