
ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ವೇಗದ ಸೆಂಚುರಿ ದಾಖಲಾಗಿದೆ. ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಸೌತ್ ಆಫ್ರಿಕಾ ನೀಡಿದ 170 ರನ್ ಟಾರ್ಗೆಟ್ ಚೇಸ್ ಮಾಡಿದ ನ್ಯೂಜಿಲೆಂಡ್ ಕೇವಲ 12.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
9 ವಿಕೆಟ್ ಗೆಲುವಿನ ಮೂಲಕ ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಈ ಸಾಧನೆಗೆ ಫಿನ್ ಅಲೆನ್ ಕೇವಲ 33 ಎಸೆತದಲ್ಲಿ ದಾಖಲೆಯ ಶತಕ ಪ್ರಮುಖ ಕಾರಣವಾಗಿದೆ.
ಫಿನ್ ಅಲೆನ್ ಶತಕ ದಾಖಲೆ
ನ್ಯೂಜಿಲೆಂಡ್ ಬ್ಯಾಟರ್ ಫಿನ್ ಅಲೆನ್ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತೀ ವೇಗದ ಶತಕ ಸಿಡಿಸಿದ್ದಾರೆ. ಇನ್ನು ಟಿ20 ಇತಿಹಾಸದಲ್ಲಿ ಮೂರನೇ ಅತೀ ವೇಗದ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟಿ20 ಇತಿಹಾಸದಲ್ಲಿ ಅತೀ ವೇಗದ ಶತಕ ದಾಖಲೆ
ಸಾಹಿಲ್ ಚೌಹ್ಹಾಣ್ (ಎಸ್ಟೋನಿಯಾ) 27 ಎಸೆತದಲ್ಲಿ ಶತಕ (2024)
ಮೊಹಮ್ಮದ್ ಫಹಾದ್ (ಟರ್ಕಿ) 29 ಎಸೆತದಲ್ಲಿ ಶತಕ (2025)
ಫಿನ್ ಅಲೆನ್ (ನ್ಯೂಜಿಲೆಂಡ್ ) 33 ಎಸೆತ (2026)
ಜಾನ್ ನಿಕೋಲ್ (ನಮೀಬಿಯಾ) 33 ಎಸೆತ (2024)
ಸಿಕಂದರ್ ರಾಜಾ (ಜಿಂಬಾಬ್ವೆ) 33 ಎಸೆತ (2024)
ಫಿನ್ ಅಲೆನ್ 33 ಎಸೆತದಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್ ಮೂಲಕ ಅಜೇಯ 100 ರನ್ ಸಿಡಿಸಿದರು. ಇತ್ತ ಟಿಮ್ ಸೈಫರ್ಟ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. 33 ಎಸೆತದಲ್ಲಿ 58 ರನ್ ಸಿಡಿಸಿದ್ದಾರೆ. ಇನ್ನು ರಾಚಿನ್ ರವೀಂದ್ರ ಅಜೇಯ 13 ರನ್ ಸಿಡಿಸಿದರು. ಇದರೊಂದಿಗೆ ನ್ಯೂಜಿಲೆಂಡ್ ಫೈನಲ್ ತಲುಪಿದೆ. ನಾಳೆ ನಡೆಯಲಿರುವ ಭಾರತ ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡ ಪ್ರಶಸ್ತಿಗಾಗಿ ನ್ಯೂಜಿಲೆಂಡ್ ವಿರುದ್ದ ಹೋರಾಟ ನಡೆಸಲಿದೆ.
ಮಾರ್ಚ್ 8ಕ್ಕೆ ಫೈನಲ್
ಮಾರ್ಚ್ 8 ರಂದು ಅಹಮ್ಮಾದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸೌತ್ ಆಫ್ರಿಕಾ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಮತ್ತೆ ಚೋಕರ್ಸ್ ಪಟ್ಟದ ಚರ್ಚೆಗೆ ಗ್ರಾಸವಾಗಿದೆ.









