
ಸಿಎಂ ಸಿದ್ದರಾಮಯ್ಯ (Cm siddaramaiah ) ಆಯವ್ಯಯದಲ್ಲಿ (Budget ) ಎಣ್ಣೆ ಪ್ರಿಯರಿಗೆ ಮುಖ್ಯಮಂತ್ರಿಗಳು ಶಾಕ್ ನೀಡಿದ್ದಾರೆ.
ಆಲ್ಕೋಹಾಲ್ (Alchohol )ಲೆವೆಲ್ ಜಾಸ್ತಿ ಇರುವಂಥಹ ಮದ್ಯದ ದರಗಳು ಏರಿಕೆಯಾಗಲಿದೆ ಎಂದು ಸಿಎಂ ಬಜೆಟ್ನಲ್ಲಿ ಘೋಷಿಸಿದ್ದಾರೆ.ಇದು ಎಣ್ಣೆ ಪ್ರಿಯರಿಗೆ ಕೊಂಚ ಗೊಂದಲ ಮೂಡಿಸಿದೆ.
ಕಂಠಪೂರ್ತಿ ಕುಡಿದು ಕಿಕ್ಕೇರಿಸಿಕೊಳ್ಳೋ ಮಧ್ಯಪ್ರಿಯರು
ಇದೀಗ ಯಾವ ಮದ್ಯಗಳ ಬಾಟಲ್ ದರ ಎಷ್ಟು ಏರಿಕೆ ಅಥವಾ ಕಡಿಮೆ ಆಗುತ್ತೆ ಅನ್ನೋದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ರಾಜ್ಯದ ರಾಜಸ್ವ ಸಂಗ್ರಹವನ್ನು ಗಣನೀಯವಾಗಿ ಏರಿಕೆ ಮಾಡಲು ನಿರ್ಧರಿಸಿದ್ದು, ಹೀಗಾಗಿಯೇ ಕೆಲ ಕ್ರಮ ಕೈಗೊಂಡಿದ್ದಾರೆ. ಕಡಿಮೆ ಆಲ್ಕೋಹಾಲ್ ಕಂಟೆಂಟ್ ಇರೋ ಮದ್ಯದ ದರ ಕಡಿಮೆಯಾಗುತ್ತಾ? ಎನ್ನುವ ಗೊಂದಲ ಮದ್ಯ ಪ್ರಿಯರಲ್ಲಿ ಮೂಡಿದೆ.
ಪ್ರಮುಖವಾಗಿ ಏಪ್ರಿಲ್ 2026ರಿಂದ ಪಾನೀಯಗಳಲ್ಲಿ ಇರುವ ಮದ್ಯದ ಅಂಶವನ್ನು ಆಧಾರವಾಗಿಟ್ಟುಕೊಂಡು ಅಬಕಾರಿ ಸುಂಕ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಮದ್ಯಪಾನ ದುಷ್ಪರಿಣಾಮಗಳು ಹಾಗೂ ಸಮಾಜ ಮೇಲೆ ಉಂಟು ಮಾಡುವ ಹಾನಿಯ ಕಾರಣ ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು ಆಧರಿಸಿ ತೆರಿಗೆ ಪದ್ದತಿಯು ಗೋಲ್ಡ್ ಸ್ಟ್ಯಾಂಡರ್ಡ್ ಆಗಿದೆ ಎಂದು ಸಿಎಂ ಘೋಷಿಸಿದ್ದಾರೆ.









