ದಕ್ಷಿಣ ಕೊಟ್ಟಾಯಂ ಜಿಲ್ಲೆಯ ಕ್ರಿಶ್ಚಿಯನ್ ಪ‍್ರಾಬಲ್ಯದ ಎರಡು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳಾಗಿ ಹಿರಿಯ ರಾಜಕಾರಣಿ ಪಿ.ಸಿ. ಜಾರ್ಜ್ ಮತ್ತು ಅವರ ಮಗ ಶೋನ್ ಜಾರ್ಜ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಕೇರಳ ವಿಧಾನಸಭಾ ಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ.

ಬಿಜೆಪಿ ಸೋಮವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಂದೆ-ಮಗನನ್ನು ಕ್ರಮವಾಗಿ ಪೂಂಜಾರ್ ಮತ್ತು ಪಾಲಾ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದೆ. ಪಿ.ಸಿ. ಜಾರ್ಜ್ ಪ್ರಸ್ತುತ ಬಿಜೆಪಿಯ ರಾಷ್ಷ್ರೀಯ ಮಂಡಳಿಯ ಸದಸ್ಯರಾಗಿದ್ದು, ಶೋನ್ ಜಾರ್ಜ್ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲ ಕೇರಳ ವಿಧಾನಸಭೆಯ ಸದಸ್ಯರಾಗಿರುವ ಪಿ.ಸಿ. ಜಾರ್ಜ್ ಅವರು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೇರಳ ಕಾಂಗ್ರೆಸ್‌ನ ವಿವಿಧ ಬಣಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, ನಂತರ ಜನಪಕ್ಷಂ (ಜಾತ್ಯಾತೀತ) ಎಂಬ ಪಕ್ಷವನ್ನು ಸ್ಥಾಪಿಸಿದ್ದರು.

2024ರ ಲೋಕಸಭಾ ಚುನಾವಣೆಗೆ ಮುನ್ನ ಅವರ ಪಕ್ಷವನ್ನು ಬಿಜೆಪಿ-ಎನ್‌ಡಿಎ ಜೊತೆ ವಿಲೀನಗೊಳಿಸಲಾಗಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!