ಪಾಟ್ನಾ: ಕನ್ನಡಿಗ ಪಡೆದಿದ್ದ ರ‍್ಯಾಂಕ್ ತನ್ನದೆಂದು ಹೇಳಿ ಸನ್ಮಾನ ಮಾಡಿ, ಹೊಗಳಿಕೆ ಪಡೆದಿದ್ದ ಬಿಹಾರದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇತ್ತೀಚಿಗಷ್ಟೇ ಮಾ.6ರಂದು 2025ರ ಸಾಲಿನ ಯುಪಿಎಸ್‌ಸಿ ಫಲಿತಾಂಶ ಪ್ರಕಟವಾಗಿತ್ತು. ಇದರಲ್ಲಿ 440ನೇ ರ‍್ಯಾಂಕ್ ಪಡೆದಿರುವುದಾಗಿ ಬಿಹಾರದ ಶೇಖ್‌ಪುರ ಜಿಲ್ಲೆಯ ರಂಜೀತ್ ಕುಮಾರ್ ಸಂಭ್ರಮಿಸಿದ್ದರು. ಜೊತೆಗೆ ಸ್ಥಳೀಯರು, ಮಾಜಿ ಆರ್‌ಜೆಡಿ ಶಾಸಕ ವಿಜಯ್ ಸಾಮ್ರಾಟ್ ಸೇರಿದಂತೆ ಪೊಲೀಸರು ಆಗಮಿಸಿ, ಅಭಿನಂದಿಸಿ, ಸನ್ಮಾನಿಸಿದ್ದರು. ಆದರೆ ಇದೀಗ ಕರ್ನಾಟಕದ ಯುವಕನೊಬ್ಬ ಪಡೆದಿದ್ದ ರ‍್ಯಾಂಕ್ ಅನ್ನು ತನ್ನದೆಂದು ಸುಳ್ಳು ಹೇಳಿದ್ದಾಗಿ ತಿಳಿದುಬಂದಿದ್ದು, ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದೆಲ್ಲದರ ನಂತರ ಫಲಿತಾಂಶವನ್ನು ಪರಿಶೀಲಿಸಿದಾಗ ಅಸಲಿಗೆ 440ನೇ ರ‍್ಯಾಂಕ್ ಪಡೆದಿದ್ದು ಕರ್ನಾಟಕದ ಚಿಕ್ಕಬಳ್ಳಾಪುರದ ರಂಜಿತ್ ಕುಮಾರ್ ಆರ್. ಆಗ ವಂಚನೆ ಬೆಳಕಿಗೆ ಬಂದಿದ್ದು, ಬಿಹಾರದ ರಂಜೀತ್ ಕುಮಾರ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ ಎನ್ನೋದು ಗೊತ್ತಾಗಿದೆ. ಬಳಿಕ ಪೊಲೀಸರು ಕರೆ ಮಾಡಿದಾಗ, ರಂಜೀತ್ ಫೋನ್ ಸ್ವಿಚ್ಛ್ ಆಫ್ ಮಾಡಿದ್ದಾರೆ.

ಪತ್ತೆಗೆ ಮುಂದಾದ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರಾ? ಎಂದು ತನಿಖೆ ನಡೆಯುತ್ತಿದೆ. ಇದಕ್ಕೂ ಮುನ್ನ ಆಕಾಂಕ್ಷಿ ಭೋಜ್‌ಪುರದ ಆಕಾಂಕ್ಷಾ ಸಿಂಗ್ ಕೂಡ ಪರೀಕ್ಷೆಯಲ್ಲಿ 301ನೇ ರ‍್ಯಾಂಕ್ ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ ಬಳಿಕ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಮತ್ತೊಬ್ಬ ವ್ಯಕ್ತಿ ರ‍್ಯಾಂಕ್ ಪಡೆದಿರುವುದಾಗಿ ಯುಪಿಎಸ್‌ಸಿ ಸ್ಪಷ್ಟನೆ ನೀಡಿತ್ತು

Leave a Reply

Your email address will not be published. Required fields are marked *

Join WhatsApp Group
error: Content is protected !!