ಬಂಟ್ವಾಳ: ಕೆಲಸಕ್ಕೆಂದು ತೆರಳಿದ ಅರಳ ಗ್ರಾಮದ ಮುಲಾರಪಟ್ಟದ ಯುವತಿಯೋರ್ವಳು ಮರಳಿ ಮನೆಗೆ ಬಾರದ ಘಟನೆ ವರದಿಯಾಗಿದೆ.
ಮುಲಾರಪಟ್ಟ ಆಝಾದ್ ನಗರ ನಿವಾಸಿ ಅಬ್ದುಲ್ ರಶೀದ್ ಅವರ ಪುತ್ರಿ ಫಾತಿಮತ್ ಇಪ್ರಾ (18) ನಾಪತ್ತೆಯಾದ ಯುವತಿ. ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಕಂಪ್ಯೂಟರ್ ತರಬೇತಿ ಪಡೆದಿದ್ದ ಆಕೆ ಬಿ.ಸಿ.ರೋಡ್‌ನ ಸೈಬರ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಮಾ. 24ರಂದು ಎಂದಿನಂತೆ ಕೆಲಸಕ್ಕೆ ತೆರಳಿದ ಫಾತಿಮತ್ ಇಪ್ರಾ ಮನೆಗೆ ವಾಪಸಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆಲಸ ಮಾಡುವ ಸ್ಥಳದ ಮನ್ಸೂರ್ ಅವರ ಬಳಿ ವಿಚಾರಿಸಿದಾಗ, ಆಕೆ ಮಾ. 24ರಂದು ಕೆಲಸಕ್ಕೆ ಬಂದಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಆಕೆಯ ತಾಯಿ ರಝೀಯಾ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ














