ಪುತ್ತೂರು, ಮಾ. 30: ಪ್ರಸಿದ್ಧ ಆಭರಣ ಸಂಸ್ಥೆ ಮುಳಿಯ ಗೋಲ್ಡ್-ಡೈಮಂಡ್ಸ್ ವತಿಯಿಂದ ಗ್ರಾಹಕರಿಗಾಗಿ ಆಯೋಜಿಸಲಾದ ‘ಡೈಮಂಡ್ ಫೆಸ್ಟ್’ ವಿಶೇಷ ಉತ್ಸವ ಭಾನುವಾರ ಉದ್ಘಾಟನೆಯಾಯಿತು.
ಸುಬ್ರಹ್ಮಣ್ಯ ಶ್ರೀಕೃಷ್ಣ ರೆಸಿಡೆನ್ಸಿ ಮಾಲಕಿ ಪ್ರಜ್ಞಾ ಶೆಣೈ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಗುಣಮಟ್ಟ ಮತ್ತು ನಂಬಿಕೆಯಿಂದ ಜನರ ವಿಶ್ವಾಸ ಗಳಿಸಿರುವ ಮುಳಿಯ ಜ್ಯುವೆಲ್ಸ್ ಹತ್ತೂರಿನಲ್ಲಿ ಮನೆಮಾತಾಗಿದೆ ಎಂದರು. ಗ್ರಾಹಕರ ಆಯ್ಕೆಗೆ ತಕ್ಕ ವಿಶಾಲ ಸಂಗ್ರಹ ಹಾಗೂ ಆತ್ಮೀಯ ಸೇವೆ ಸಂಸ್ಥೆಯ ವಿಶೇಷತೆ ಎಂದು ಹೇಳಿದರು. ಉತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದರು.
ವೈದ್ಯ ಡಾ. ಎಂ.ಎಸ್. ಶೆಣೈ ಮಾತನಾಡಿ, ಸಂಸ್ಥೆಯೊಂದಿಗೆ ಇರುವ ಆತ್ಮೀಯ ಒಡನಾಟವನ್ನು ಸ್ಮರಿಸಿ, ಮುಳಿಯ ಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಶುಭಾಶಯ ತಿಳಿಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಕಳೆದ 23 ವರ್ಷಗಳಿಂದ ನಡೆಯುತ್ತಿರುವ ಡೈಮಂಡ್ ಫೆಸ್ಟ್‌ಗೆ ಇತ್ತೀಚಿನ ವರ್ಷಗಳಲ್ಲಿ ಹೊಸ ರೂಪ ನೀಡಲಾಗಿದೆ ಎಂದರು. ವಜ್ರಾಭರಣ ಖರೀದಿ ಕೈಗೆಟುಕುವ ದರದಲ್ಲಿ ಸಾಧ್ಯವಾಗುವಂತೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಮುಳಿಯ ಗೋಲ್ಡ್-ಡೈಮಂಡ್ಸ್‌ನಲ್ಲಿ ವೈವಿಧ್ಯಮಯ ಸಂಗ್ರಹ ಲಭ್ಯವಿದ್ದು, ವಜ್ರಾಭರಣಗಳ ಮೇಲೆ ಶೇ.95 ಎಕ್ಸ್‌ಚೇಂಜ್ ಹಾಗೂ ಶೇ.90 ಬೈಬ್ಯಾಕ್ ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಥಮ ಗ್ರಾಹಕಿ ನೆಹರೂನಗರದ ಸಿಂಚನಾ ಅವರಿಗೆ ವಜ್ರಾಭರಣ ಹಸ್ತಾಂತರಿಸಲಾಯಿತು. ಗ್ರಾಹಕಿ ಮಮತಾ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉದ್ಯಮಿ ಪ್ರಜ್ವಲ್ ಕಾಮತ್, ಆಡಳಿತ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ಉಪಸ್ಥಿತರಿದ್ದರು. ರಾಜೇಶ್ ವಂದಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಫೆಸ್ಟ್ ವಿಶೇಷ:
‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್!’ ಘೋಷಣೆಯೊಂದಿಗೆ ನಡೆಯುತ್ತಿರುವ ಉತ್ಸವದಲ್ಲಿ ₹50,000ಕ್ಕಿಂತ ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆ ನೀಡಲಾಗುತ್ತಿದೆ. ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲುವ ಅವಕಾಶವೂ ಕಲ್ಪಿಸಲಾಗಿದೆ.
ಮದುವೆ ಹಾಗೂ ಹಬ್ಬದ ಸೀಸನ್ ಗಮನದಲ್ಲಿಟ್ಟುಕೊಂಡು ವಿವಿಧ ವಿನ್ಯಾಸಗಳ ಹಾರಗಳು, ಕಿವಿಯೋಲೆಗಳು, ಉಂಗುರಗಳು ಸೇರಿದಂತೆ ನವೀನ ವಜ್ರಾಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ವಜ್ರಾಭರಣಗಳ ಮೇಲೆ ಶೇ.95 ಎಕ್ಸ್‌ಚೇಂಜ್ ಹಾಗೂ ಶೇ.90 ಬೈಬ್ಯಾಕ್ ಸೌಲಭ್ಯ ಲಭ್ಯವಿದ್ದು, ಹಳೆಯ ಆಭರಣಗಳನ್ನು ಹೊಸದಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅಮೂಲ್ಯ ಡೈಮಂಡ್ಸ್ ಹಾಗೂ ಕಿನ್ನ ಡೈಮಂಡ್-ಗೋಲ್ಡ್ ಜ್ಯುವೆಲ್ಲರಿ ಬ್ರ್ಯಾಂಡ್‌ಗಳ ಸಹಭಾಗಿತ್ವದಲ್ಲಿ ಉತ್ಸವ ನಡೆಯುತ್ತಿದೆ. ಪುತ್ತೂರು, ಬೆಳ್ತಂಗಡಿ, ಮಡಿಕೇರಿ ಮತ್ತು ಗೋಣಿಕೊಪ್ಪ ಶಾಖೆಗಳಲ್ಲಿ ಡೈಮಂಡ್ ಫೆಸ್ಟ್ ಆಯೋಜಿಸಲ್ಪಟ್ಟಿದ್ದು, ಗ್ರಾಹಕರು ಸಮೀಪದ ಶೋರೂಮ್‌ಗಳಿಗೆ ಭೇಟಿ ನೀಡಿ ಆಫರ್‌ಗಳನ್ನು ಸದುಪಯೋಗಪಡಿಸಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!