ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮ ಈಗ ವಿಶ್ವ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಒಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಮಧ್ಯಪ್ರಾಚ್ಯದ ಸುವರ್ಣ ಯುಗ ಎಂದು ಬಣ್ಣಿಸುತ್ತಿದ್ದರೆ, ಇತ್ತ ಇಸ್ರೇಲ್‌ನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು(Netanyahu Failed) ವಿರುದ್ಧ ಬಂಡಾಯದ ಕಿಡಿ ಹೊತ್ತಿಕೊಂಡಿದೆ.

ಇತಿಹಾಸದಲ್ಲೇ ಅತಿದೊಡ್ಡ ರಾಜಕೀಯ ದುರಂತ: ಇಸ್ರೇಲ್ ಪ್ರತಿಪಕ್ಷಗಳ ಆಕ್ರೋಶ

ಇಸ್ರೇಲ್‌ನ ಪ್ರಮುಖ ವಿರೋಧ ಪಕ್ಷದ ನಾಯಕ ಯಾಯಿರ್ ಲ್ಯಾಪಿಡ್, ಪ್ರಧಾನಿ ನೆತನ್ಯಾಹು ಅವರ ರಾಜತಾಂತ್ರಿಕ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ. ನಮ್ಮ ಇತಿಹಾಸದಲ್ಲಿ ಇಂತಹ ರಾಜಕೀಯ ದುರಂತ ಹಿಂದೆಂದೂ ಸಂಭವಿಸಿರಲಿಲ್ಲ. ನಮ್ಮ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇಸ್ರೇಲ್ ಆ ಚರ್ಚೆಯ ಮೇಜಿನ ಮೇಲೆಯೇ ಇರಲಿಲ್ಲ ಎಂದು ಗುಡುಗಿದ್ದಾರೆ.
ಲ್ಯಾಪಿಡ್ ಅವರ ಪ್ರಮುಖ ಟೀಕೆಗಳು

1. ಇಸ್ರೇಲ್ ಸೇನೆಯು ನೀಡಿದ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದೆ, ಆದರೆ ನೆತನ್ಯಾಹು ರಾಜಕೀಯವಾಗಿ ಮತ್ತು ಕಾರ್ಯತಂತ್ರವಾಗಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
2. ನೆತನ್ಯಾಹು ಅವರ ಅಹಂಕಾರ ಮತ್ತು ನಿರ್ಲಕ್ಷ್ಯದಿಂದ ಆಗಿರುವ ಹಾನಿಯನ್ನು ಸರಿಪಡಿಸಲು ನಮಗೆ ಇನ್ನು ಹಲವು ವರ್ಷಗಳು ಬೇಕಾಗಬಹುದು.
3. ತಾವು ಹಾಕಿಕೊಂಡ ಒಂದೇ ಒಂದು ಗುರಿಯನ್ನೂ ತಲುಪಲು ಪ್ರಧಾನಿಗಳಿಗೆ ಸಾಧ್ಯವಾಗಿಲ್ಲ.
ಇದನ್ನು ಓದಿ: ಕದನ ವಿರಾಮಕ್ಕೆ ಇರಾನ್ನ 10 ಷರತ್ತುಗಳನ್ನು ಒಪ್ಪಿದ ಟ್ರಂಪ್; ಇದು ನಮ್ಮ ಗೆಲುವು ಎಂದ ಇರಾನ್ | Iran
ಟ್ರಂಪ್ ಮತ್ತು ಸುವರ್ಣ ಯುಗದ ಕನಸು

ಮತ್ತೊಂದೆಡೆ, ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ನಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ವಿಶ್ವ ಶಾಂತಿಗೆ ಇದು ದೊಡ್ಡ ದಿನವಾಗಿದ್ದು, ಹೋರ್ಮುಜ್ ಜಲಸಂಧಿಯಲ್ಲಿನ ಸಂಚಾರ ದಟ್ಟಣೆಯನ್ನು ಸರಿಪಡಿಸಲು ಅಮೆರಿಕ ಸಹಾಯ ಮಾಡಲಿದೆ. ಇರಾನ್ ಈಗ ಪುನರ್ನಿರ್ಮಾಣ ಪ್ರಕ್ರಿಯೆಯನ್ನು ಆರಂಭಿಸಬಹುದು. ಇದು ಮಧ್ಯಪ್ರಾಚ್ಯದ ಸುವರ್ಣ ಯುಗವಾಗಲಿದೆ ಎಂದು ಬರೆದುಕೊಂಡಿದ್ದಾರೆ.
ಅಚ್ಚರಿಯ ವಿಷಯವೆಂದರೆ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರ ಮನವಿಯ ಮೇರೆಗೆ ತಾವು ಇರಾನ್ ಮೇಲಿನ ಬಾಂಬ್ ದಾಳಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.
ಇರಾನ್ ಪಾಲಿಗೆ ಇದು ವಿಜಯೋತ್ಸವ?

ಇರಾನ್ ಈ 14 ದಿನಗಳ ಕದನ ವಿರಾಮವನ್ನು ತನ್ನ ದೊಡ್ಡ ಗೆಲುವು ಎಂದು ಬಿಂಬಿಸುತ್ತಿದೆ. ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಇರಾನ್, ಈಗ ತನ್ನ 10 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕ ಒಪ್ಪಿಕೊಳ್ಳುವಂತೆ ಮಾಡಿದೆ ಎಂದು ಹೇಳಿಕೊಂಡಿದೆ.
ಇರಾನ್‌ನ ಪ್ರಮುಖ ಬೇಡಿಕೆಗಳು

1. ಹೋರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಸಂಪೂರ್ಣ ನಿಯಂತ್ರಣ.
2. ಇರಾನ್‌ನ ಪರಮಾಣು ಪುಷ್ಟೀಕರಣ ಕಾರ್ಯಕ್ರಮಕ್ಕೆ ಮಾನ್ಯತೆ.
3. ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯಕ ನಿರ್ಬಂಧಗಳ ತೆರವು.
4. ಮಧ್ಯಪ್ರಾಚ್ಯದಿಂದ ಅಮೆರಿಕ ಸೈನ್ಯದ ಹಿಂತೆಗೆತ.
5. ಸ್ಥಗಿತಗೊಂಡಿರುವ ಇರಾನ್‌ನ ಆಸ್ತಿಗಳ ಬಿಡುಗಡೆ.
ಸಂಸ್ಕೃತಿಯ ಸಂಘರ್ಷ ಮತ್ತು ಟ್ವಿಟರ್ ಸಮರ

ಟ್ರಂಪ್ ಅವರು ಈ ಹಿಂದೆ ಇರಾನ್ ನಾಗರಿಕತೆಯೇ ನಾಶವಾಗಲಿದೆ ಎಂಬ ಎಚ್ಚರಿಕೆ ನೀಡಿದ್ದರು. ಇದಕ್ಕೆ ತುರ್ಕಿಯೆಯಲ್ಲಿರುವ ಇರಾನ್ ರಾಯಭಾರ ಕಚೇರಿಯು ಖಡಕ್ ಆಗಿ ಪ್ರತಿಕ್ರಿಯಿಸಿದೆ. ಅಲೆಕ್ಸಾಂಡರ್ ಇದನ್ನು ಸುಟ್ಟನು, ಮಂಗೋಲರು ದಾಳಿ ಮಾಡಿದರು, ಇತಿಹಾಸವೇ ಇದನ್ನು ಪರೀಕ್ಷಿಸಿದೆ. ಆದರೂ ಇರಾನ್ ಇನ್ನೂ ಅಸ್ತಿತ್ವದಲ್ಲಿದೆ. ಒಬ್ಬ ಮನೋರೋಗಿಯ ಬೆದರಿಕೆಯಿಂದ ಕಾಲವೇ ಅಳಿಸಲು ಸಾಧ್ಯವಾಗದ ಸಂಸ್ಕೃತಿಯನ್ನು ಮುಗಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದೆ.
ಈಗಿನ ಪರಿಸ್ಥಿತಿ ಏನು..?

ಪ್ರಸ್ತುತ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಷರತ್ತಿನ ಮೇಲೆ ಎರಡು ವಾರಗಳ ಕಾಲ ಯುದ್ಧಕ್ಕೆ ವಿರಾಮ ನೀಡಲಾಗಿದೆ. ಆದರೆ, ಇಸ್ರೇಲ್‌ನ ಭದ್ರತೆಯನ್ನು ಕಡೆಗಣಿಸಿ ಅಮೆರಿಕ ತೆಗೆದುಕೊಂಡಿರುವ ಈ ನಿರ್ಧಾರವು ಮುಂದಿನ ದಿನಗಳಲ್ಲಿ ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸುವ ಸಾಧ್ಯತೆಯಿದೆ.
ಜಗತ್ತು ನೆಮ್ಮದಿಯ ನಿಟ್ಟುಸಿರು ಬಿಡಬೇಕೋ ಅಥವಾ ಇದು ಮತ್ತೊಂದು ದೊಡ್ಡ ಚಂಡಮಾರುತದ ಮುನ್ಸೂಚನೆಯೋ ಎಂಬ ಆತಂಕ ಮನೆಮಾಡಿದೆ. ನೆತನ್ಯಾಹು ಅವರ ರಾಜಕೀಯ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ,(

Leave a Reply

Your email address will not be published. Required fields are marked *

Join WhatsApp Group
error: Content is protected !!