ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಯ ದೇಹಕ್ಕೆ ‘ಹೆಚ್‌ಐವಿ’ (HIV) ಸೋಂಕಿತ ರಕ್ತವನ್ನು ಇಂಜೆಕ್ಷನ್ ಮೂಲಕ ಚುಚ್ಚಿದ ಕಿರಾತಕನ ಕೃತ್ಯಕ್ಕೆ, 24 ವರ್ಷದ ಯುವತಿ ಬಲಿಯಾಗಿದ್ದಾಳೆ. ಕಾಯಿಲೆಗಿಂತಲೂ ಆ ಅವಮಾನವನ್ನು ಸಹಿಸಲಾರದೆ, ತನಗೇನಾಗುತ್ತದೋ ಎಂಬ ಭಯದಿಂದ ರಮಣಿ ಎಂಬ ಯುವತಿ ಆತ್ಮಹತ್ಯೆಯ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಪೋಷಕರಿಗೆ ತೀರದ ವೇದನೆ ಉಂಟುಮಾಡಿದೆ.
ಜೈಲಿನಲ್ಲಿಆರೋಪಿ
ಬಾಧಿತ ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಆಗಲೇ ಪ್ರಕರಣ ದಾಖಲಿಸಿಕೊಂಡು ಮನೋಹರ್‌ನನ್ನು ಬಂಧಿಸಿ ರಿಮಾಂಡ್‌ಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಜೈಲಿನಲ್ಲಿದ್ದಾನೆ. ಆದರೆ ಯುವತಿಯ ಆತ್ಮಹತ್ಯೆಯಿಂದಾಗಿ ಈ ಕೇಸ್ ಈಗ ಹೊಸ ತಿರುವು ಪಡೆದಿದೆ. ರಮಣಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ. ಆ ಇಂಜೆಕ್ಷನ್‌ನಲ್ಲಿ ಇದ್ದದ್ದು ನಿಜವಾಗಿಯೂ ಹೆಚ್‌ಐವಿ ರಕ್ತವೇ? ಅಥವಾ ಕೇವಲ ಹೆದರಿಸಲು ಹಾಗೆ ಮಾಡಿದ್ದಾನೆಯೇ? ಎಂಬ ಕೋನದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಓದಿ ಉನ್ನತ ಮಟ್ಟಕ್ಕೇರುತ್ತಾಳೆ ಎಂದು ನಂಬಿದ್ದ ಮಗಳು ಕಣ್ಣ ಮುಂದೆಯೇ ಶವವಾಗಿ ಬಿದ್ದಿರುವುದನ್ನು ಕಂಡು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.














