ಬೀಚ್ ಬದಿಯಲ್ಲಿ 22ರ ಹರೆಯದ ಯುವತಿಯ ಮತೃದೇಹ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಕೂಲಂಕುಷವಾಗಿ ಪರಿಶೀಲನೆ ನಡೆಸದ್ದಾರೆ.

ಮೇಲ್ನೋಟಕ್ಕೆ ಇದೊಂದು ಬದುಕು ಅಂತ್ಯಗೊಳಿಸಿದ ಘಟನೆ ಅಥವಾ ಬೀಚ್‌ನಲ್ಲಿ ನಡೆದ ದುರಂತ ಘಟನೆ ಎಂದೇ ಪೊಲೀಸರು ಅಂದುಕೊಂಡಿದ್ದರು. ಆದರೂ ಕೆಲ ಅನುಮಾನಗಳು ಪೊಲೀಸರನ್ನು ಕಾಡಿತ್ತು. ಹೀಗೆ ಬೀಚ್‌ನಲ್ಲಿ ಪತ್ತೆಯಾದ 22ರ ಹರೆಯದ ಫಾತಿಮಾ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದು ಅಸ್ವಾಭಾವಿಕ ಸಾವು ಎಂದು ಪೊಲೀಸರಿಗೆ ಕೆಲ ಸುಳಿವು ಸಿಕ್ಕಿದೆ. ಈ ಪ್ರಕರಣ ಸಂಬಂಧ ಫಾತಿಮಾ ಪತಿ ಅರೆಸ್ಟ್ ಆಗಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ.

ಮುಖ ಕೆಳಕ್ಕಾಗಿ ಬಿದ್ದಿದ್ದ ಮೃತದೇಹ

ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿ ಬೀಚ್‌ನಲ್ಲಿ ಪತ್ತೆಯಾಗಿದ್ದ ಯುವತಿಯ ಶವವನ್ನು ಗುರುತಿಸಲಾಗಿದೆ. ಮೃತ ಯುವತಿ ಪೊನ್ನಾನಿ ನಿವಾಸಿ ಫಾತಿಮಾ (22) ಎಂದು ಪೊಲೀಸರು ತಿಳಿಸಿದ್ದಾರೆ. ಪೊನ್ನಾನಿ ಬಂದರು ಸಮೀಪ ಯುವತಿಯ ಮೃತದೇಹ ಮುಖ ಕೆಳಗೆ ಮಾಡಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಾವು ಅಸ್ವಾಭಾವಿಕ ಎಂದು ತಿರೂರ್ ಡಿವೈಎಸ್‌ಪಿ ಸಿದ್ದಿಕ್ ಹೇಳಿದ್ದಾರೆ.

ಮೊದಲ ನೋಟಕ್ಕೆ ಇದು ಬೀಚ್‌ನಲ್ಲಿ ಆಡುವಾಗ ಕಾಲು ಜಾರಿ ಅಥವಾ ಅಸ್ವಸ್ಥಗೊಂಡು ಸಾವು ಕಂಡ ಘಟನೆ ರೀತಿ ಕಂಡುಬಂದಿತ್ತು. ಆದರೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಫಾತಿಮಾ ಕುಟುಂಬಸ್ಥರ ಕುರಿತು ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ಫತಿಮಾ ಪತಿ ಕುರಿತು ವಿಚಾರಣೆ ನಡೆಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಪತಿ ಜೊತೆ ಬೀಚ್‌ಗೆ ಹೋಗಿದ್ದ ಫಾತಿಮಾ

ಫಾತಿಮಾ ತನ್ನ ಪತಿ ಮೊಹಮ್ಮದ್ ಜೊತೆ ಬೀಚ್‌ಗೆ ಹೋಗಿದ್ದಳು. ಬೀಚ್‌ನಿಂದ ಮೊಹಮ್ಮದ್ ಮರಳಿದ್ದರೆ, ಪತ್ನಿ ಫಾತಿಮಾ ಮರಳಲೇ ಇಲ್ಲ. ಇತ್ತ ಬೀಚ್‌ನಿಂದ ಮರಳಿದ ಮೊಹಮ್ಮದ್ ಪರಪ್ಪನಂಗಡಿ ಬಳಿಯ ರೈಲ್ವೆ ಹಳಿಗೆ ತಲೆ ಕೊಟ್ಟು ಬದುಕು ಅಂತ್ಯಗೊಳಿಸಲು ಪ್ರಯತ್ನಿಸಿದ್ದ. ಇದೇ ವೇಳೆ ಪೊಲೀಸರು ಮೊಹಮ್ಮದ್‌ನ ವಶಕ್ಕೆ ಪಡೆದಿದ್ದಾರೆ. ಪತ್ನಿ ಕೊಲೆ ಮಾಡಿ ಬದುಕು ಅಂತ್ಯಗೊಳಿಸುವ ಪ್ರಯತ್ನ ಮಾಡಿರುವ ಸಾಧ್ಯತೆ ಮೇರೆಗೆ ಪತಿ ಮೊಹಮ್ಮದ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸದ್ಯಕ್ಕೆ, ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಶವ ಪತ್ತೆಯಾದ ಸ್ಥಳದಲ್ಲಿ ಫಾತಿಮಾಳನ್ನು ನೋಡಿದ ಕೆಲ ಸಾಕ್ಷಿಗಳಿದ್ದಾರೆ. ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!