ಕಳೆದ ತಿಂಗಳು ಜಾರಿಗೆ ಬಂದ ಕದನ ವಿರಾಮದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧದ ಯುದ್ಧವು ಮುಕ್ತಾಯಗೊಂಡಿದೆ ಎಂದು ಟ್ರಂಪ್ ಆಡಳಿತ ದಿಢೀರ್ ಘೋಷಣೆ ಮಾಡಿದೆ.
ಈ ಘೋಷಣೆಯು ಕೇವಲ ಯುದ್ಧದ ನಿಲ್ಲಿಸುವುದಷ್ಟೇ ಅಲ್ಲದೆ, ಅಮೆರಿಕದ ಸಂಸತ್ತಾದ ಕಾಂಗ್ರೆಸ್‌ನಿಂದ ಪಡೆಯಬೇಕಾದ ಕಡ್ಡಾಯ ಅನುಮೋದನೆಯನ್ನು ತಪ್ಪಿಸುವ ಒಂದು ಕಾರ್ಯತಂತ್ರ ಎಂದು ಪರಿಗಣಿಸಲಾಗಿದೆ.
ಅಮೆರಿಕದ ಕಾನೂನಿನ ಪ್ರಕಾರ, ಅಧ್ಯಕ್ಷರು ಯಾವುದೇ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ 60 ದಿನಗಳ ಒಳಗೆ ಕಾಂಗ್ರೆಸ್‌ನ ಅನುಮೋದನೆ ಪಡೆಯುವುದು ಕಡ್ಡಾಯ. ಆದರೆ, ಏಪ್ರಿಲ್ 7 ರಿಂದ ಅಮೆರಿಕ ಮತ್ತು ಇರಾನ್ ಪಡೆಗಳ ನಡುವೆ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ ಎಂದು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಾದಿಸಿದ್ದಾರೆ.
ಕದನ ವಿರಾಮ ಜಾರಿಯಲ್ಲಿರುವುದರಿಂದ ಈ 60 ದಿನಗಳ ಕಾಲಮಿತಿಯು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ ಅಥವಾ ನಿಲ್ಲುತ್ತದೆ ಎಂಬುದು ಶ್ವೇತಭವನದ ವಾದವಾಗಿದೆ.ಟ್ರಂಪ್ ಆಡಳಿತದ ಈ ಹೊಸ ಹೇಳಿಕೆಯನ್ನು ಡೆಮೋಕ್ರಾಟ್‌ಗಳು ತೀವ್ರವಾಗಿ ವಿರೋಧಿಸಿದ್ದಾರೆ. ಸೆನೆಟರ್ ಟಿಮ್ ಕೈನೆ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ಈ ವಾದಕ್ಕೆ ಮಾನ್ಯತೆ ಇಲ್ಲ ಮತ್ತು ಇದು ಯುದ್ಧದ ಕುರಿತು ಗಂಭೀರ ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕದ ಜನರ ಮೇಲೆ ಈ ಯುದ್ಧವನ್ನು ಅನಗತ್ಯವಾಗಿ ಹೇರಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದಾರೆ.ಕಾಂಗ್ರೆಸ್ ತನ್ನ ಅಧಿಕಾರವನ್ನು ಸೀಮಿತಗೊಳಿಸುತ್ತಿರುವುದನ್ನು ಆಗಾಗ ಟೀಕಿಸುವ ಅಧ್ಯಕ್ಷ ಟ್ರಂಪ್, ಮುಂದಿನ ಮಿಲಿಟರಿ ಆಯ್ಕೆಗಳ ಕುರಿತು ಶೀಘ್ರದಲ್ಲೇ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಇರಾನ್ ಜೊತೆ ರಹಸ್ಯವಾಗಿ ಮಾತುಕತೆಗಳು ನಡೆಯುತ್ತಿವೆ ಮತ್ತು ಆ ದೇಶದ ಆರ್ಥಿಕತೆಯು ಅಮೆರಿಕದ ದಿಗ್ಬಂಧನದಿಂದಾಗಿ ಕುಸಿಯುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.ಶ್ವೇತಭವನ ಮತ್ತು ಕಾಂಗ್ರೆಸ್ ನಡುವಿನ ಈ ಕಾನೂನು ಸಂಘರ್ಷವು ಅಮೆರಿಕದ ವಿದೇಶಾಂಗ ನೀತಿಯಲ್ಲಿ ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಇರಾನ್ ಜೊತೆಗಿನ ಶಾಂತಿ ಒಪ್ಪಂದವು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ.
ವಾಷಿಂಗ್ಟನ್, ಮೇ 1: ಕಳೆದ ತಿಂಗಳು ಜಾರಿಗೆ ಬಂದ ಕದನ ವಿರಾಮದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧದ ಯುದ್ಧವು ಮುಕ್ತಾಯಗೊಂಡಿದೆ ಎಂದು ಟ್ರಂಪ್ ಆಡಳಿತ ದಿಢೀರ್ ಘೋಷಣೆ ಮಾಡಿದೆ. ಈ ಘೋಷಣೆಯು ಕೇವಲ ಯುದ್ಧದ ನಿಲ್ಲಿಸುವುದಷ್ಟೇ ಅಲ್ಲದೆ, ಅಮೆರಿಕದ ಸಂಸತ್ತಾದ ಕಾಂಗ್ರೆಸ್‌ನಿಂದ ಪಡೆಯಬೇಕಾದ ಕಡ್ಡಾಯ ಅನುಮೋದನೆಯನ್ನು ತಪ್ಪಿಸುವ ಒಂದು ಕಾರ್ಯತಂತ್ರ ಎಂದು ಪರಿಗಣಿಸಲಾಗಿದೆ.














