ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಮೆಸ್ಕಾಂ ವತಿಯಿಂದ ಪುತ್ತೂರು ನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮೇ 5ರಂದು (ಮಂಗಳವಾರ) ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್ ಓಲ್ಸ್, ಕೆಮ್ಮಾಯಿ ಮತ್ತು ವಾಟರ್ ಸಪ್ಲೈ ಫೀಡರ್‌ಗಳಲ್ಲಿ ಪೂರ್ವಾಹ್ನ 10ರಿಂದ ಅಪರಾಹ್ನ 5.30ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಟ್ಯಾಕ್ಸಿ ಸ್ಟಾಂಡ್, ದೇವಣ್ಣ ಕಿಣಿ ಬಿಲ್ಡಿಂಗ್, ರೂಪಾ ಕಾಂಪ್ಲೆಕ್ಸ್, ಅಕ್ಷಯ ಮೋಟಾರ್, ಸಿಟಿ ಸೆಂಟರ್, ಕಲ್ಲಾರೆ, ದರ್ಬೆ ಸರ್ಕಲ್, ಅಶ್ವಿನಿ ಹೋಟೆಲ್, ಬಿರಮಲೆ, ಮಕ್ಕಳ ಮಂಟಪ, ಹನುಮಾನ್ ಮಿಲ್, ಐಬಿ, ಸಿಟಿಒ ರಸ್ತೆ, ಎಪಿಎಂಸಿ ರಸ್ತೆ, ಸಾಮೆತ್ತಡ್ಕ, ಎಂ.ಟಿ. ರಸ್ತೆ, ಚಿಕ್ಕಮತ್ತೂರು, ಮಡಿವಾಳಕಟ್ಟೆ, ಕೋರ್ಟ್ ರಸ್ತೆ, ಮಿನಿ ವಿಧಾನಸೌಧ, ಚೇತನಾ ಆಸ್ಪತ್ರೆ, ಪರ್ಲಡ್ಕ, ಬೈಪಾಸ್, ಗೋಳಿಕಟ್ಟೆ, ಕುಂಜೂರು ದೇವಸ್ಥಾನ, ತೆಂಕಿಲ, ಬಪ್ಪಳಿಗೆ, ಬಾಲವನ, ಉರ್ಲಾಂಡಿ, ಸರ್ಕಾರಿ ಆಸ್ಪತ್ರೆ, ಕರ್ಮಲ, ಬೊಳುವಾರು , ಬೀರ್ನಹಿಟ್ಟು, ಕೆಮ್ಮಾಯಿ ಮಹಾವಿಷ್ಣು ದೇವಸ್ಥಾನ, ಬಡವು, ಸಾಲ್ಮರ ಹಾಗೂ ನೆಕ್ಕಿಲಾಡಿ ನೀರು ಸರಬರಾಜು ಘಟಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!