ಪುತ್ತೂರು: ಐದು ತಿಂಗಳ ಹಿಂದಷ್ಟೇ ನಗದು ಹಾಗೂ ದೇವರ ಬೆಳ್ಳಿಯ ಮೂರ್ತಿ ಕಳವಾಗಿದ್ದ ವೈದ್ಯರ ಮನೆಯಲ್ಲಿ ಇದೀಗ ಮತ್ತೊಮ್ಮೆ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ.
ಮೈಸೂರಿನಲ್ಲಿ ಕ್ಲಿನಿಕ್ ಹೊಂದಿರುವ ಡಾ. ವೆಂಕಟರಮಣ ಭಟ್ ಅವರ ಪುತ್ತೂರು ಉರ್ಲಾಂಡಿ ಕಸಬಾ ಗ್ರಾಮದ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಏ.4ರಂದು ಅವರು ಮೈಸೂರಿಗೆ ತೆರಳಿದ್ದು, ಮೇ 19ರಂದು ಮನೆಗೆ ಮರಳಿದಾಗ ಹಾಸಿಗೆಯ ತಲೆದಿಂಬಿನ ಅಡಿಯಲ್ಲಿ ಇಟ್ಟಿದ್ದ ₹45 ಸಾವಿರ ನಗದು ಕಳುವಾಗಿರುವುದು ಪತ್ತೆಯಾಯಿತು.
ಮನೆಯ ಹಂಚು ತೆಗೆದು ಒಳನುಗ್ಗಿ ಕಳ್ಳತನ ನಡೆಸಿರುವುದಾಗಿ ತಿಳಿದುಬಂದಿದೆ. ಸಂಬಂಧಿಕ ಬಿ.ಕೆ. ಅವಿನಾಶ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.














