ಪುತ್ತೂರು: ದಿ ಆರ್ಟ್ ಆಫ್ ಜ್ಯುವೆಲ್ಲರಿ (ಎಒಜೆ) ಮ್ಯಾಗಜೀನ್‌ ಬಿಡುಗಡೆ ಮಾಡಿರುವ 2024-25ನೇ ಸಾಲಿನ ವಿಶೇಷ ಶ್ರೇಯಾಂಕ ಪಟ್ಟಿಯಲ್ಲಿ ಪುತ್ತೂರಿನ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ಭಾರತದ ಟಾಪ್‌ 100 ಜ್ಯುವೆಲ್ಲರಿ ಮಳಿಗೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಭಾರತದಾದ್ಯಂತ ಇರುವ ಸುಮಾರು ಐದು ಲಕ್ಷಕ್ಕೂ ಅಧಿಕ ಜ್ಯುವೆಲ್ಲರಿ ಸಂಸ್ಥೆಗಳ ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಈ ಶ್ರೇಯಾಂಕ ಪ್ರಕಟಿಸಲಾಗಿದೆ. ಪುತ್ತೂರನ್ನು ಕೇಂದ್ರವಾಗಿಟ್ಟುಕೊಂಡು ವಿವಿಧ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿರುವ ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ ಸಂಸ್ಥೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ.
ಇಂಟರ್‌ನ್ಯಾಷನಲ್ ಜಿಮೋಲಾಜಿಕಲ್ ಇನ್‌ಸ್ಟಿಟ್ಯೂಟ್‌ (IGI) ಸಹಯೋಗದಲ್ಲಿ ದಿ ಆರ್ಟ್ ಆಫ್ ಜ್ಯುವೆಲ್ಲರಿ ಮ್ಯಾಗಜೀನ್‌ ಈ ವಿಶೇಷ ಸಂಚಿಕೆಯನ್ನು ಪ್ರಕಟಿಸಿದ್ದು, 2025ನೇ ಆರ್ಥಿಕ ವರ್ಷದ ಒಟ್ಟು ವ್ಯವಹಾರ ಆದಾಯದ ಆಧಾರದ ಮೇಲೆ ದೇಶದ ಟಾಪ್‌ 100 ಚಿನ್ನಾಭರಣ ವ್ಯಾಪಾರಿಗಳಿಗೆ ಶ್ರೇಯಾಂಕ ನೀಡಲಾಗಿದೆ.
ಆಭರಣ ಉದ್ಯಮದ ಪ್ರಮುಖ ಸುದ್ದಿ, ವಿಶ್ಲೇಷಣೆ ಮತ್ತು ಮಾರುಕಟ್ಟೆ ಮಾಹಿತಿಯನ್ನು ನೀಡುವ ಪ್ರಮುಖ ಮ್ಯಾಗಜೀನ್‌ ಆಗಿರುವ ಎಒಜೆ ಪ್ರಕಟಿಸಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನ ಚೇರ್‌ಮನ್‌ ಜಿ.ಎಲ್. ಬಲರಾಮ ಆಚಾರ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!