ಸುಳ್ಯ: ಪೊಲೀಸ್ ಇಲಾಖೆಯಲ್ಲಿ 29 ವರ್ಷಗಳ ಸೇವಾನುಭವ ಹೊಂದಿರುವ ಸ್ಕರಿಯ ಅವರು ಸುಳ್ಯ ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್ಸ್ಟೇಬಲ್ ಆಗಿ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸ್ಕರಿಯ ಅವರು, ಮಂಗಳೂರು ಪೂರ್ವ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಪೊಲೀಸ್ ಠಾಣೆ, ಡಿಸಿಬಿ ಮಂಗಳೂರು ಹಾಗೂ ಪುತ್ತೂರು ನಗರ ಪೊಲೀಸ್ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಪ್ರಸ್ತುತ ಸುಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಬಂದಿರುವ ಅವರು, ಕಡಬ ತಾಲೂಕಿನ ಬಲ್ಯ ಗ್ರಾಮದ ಮಾತ್ರಡಿ ನಿವಾಸಿಗಳಾದ ದಿವಂಗತ ಎಂ.ಜಿ. ಅಬ್ರಹಾಂ ಹಾಗೂ ದಿವಂಗತ ಸಾರಮ್ಮ ಅಬ್ರಹಾಂ ದಂಪತಿಯ ಪುತ್ರರಾಗಿದ್ದಾರೆ













