ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಾಗಲ್ಲ. ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತು ಕೊಟ್ಟಿದ್ದರು. ಖಾತೆ ವಿಚಾರವಾಗಿ ಅಲ್ಲ, ನನಗೆ ತೀವ್ರ ಬೇಸರವಾಗಿದೆ. ಎಷ್ಟು ಎಂದು ನಾನು ಸಹಿಸಿಕೊಳ್ಳಲಿ.
ಹೀಗಾಗಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಮರುದಿನವೇ ವಿಕೆಟ್ ಪತನಗೊಂಡಿದೆ. ನಾನು ಖಾತೆಗಾಗಿ ರಾಜೀನಾಮೆ ಕೊಡ್ತಾಯಿಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಯಾಕೆ ರಾಜೀನಾಮೆ ಕೊಡ್ತಾಯಿದ್ದೇನೆ ಅಂತಾ ಮಾಧ್ಯಮದ ಮುಂದೆ ಬಂದು ಹೇಳ್ತಾಯಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಯಾರ ಬಳಿಯೂ ಮಾತನಾಡಿಲ್ಲ. ನನ್ನ ಮನೆಯಲ್ಲೂ ಯಾರಿಗೂ ಗೊತ್ತಿಲ್ಲ. ಈ ವಿಚಾರದಲ್ಲಿ ಚರ್ಚೆಯ ಅವಶ್ಯಕತೆ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.






