ಪುತ್ತೂರು, ಜೂ.15: ಉಪ್ಪಿನಂಗಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಉಬಾರ್ ಮಂಜ ಬೈದ್ಯ ಅವರ ಪುತ್ಥಳಿ ನಿರ್ಮಿಸುವಂತೆ ಆಗ್ರಹಿಸಿ ಪುತ್ತೂರಿನ ನೂತನ ಬಿಲ್ಲವ ಬ್ರಿಗೇಡ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಭಾನುವಾರ ಮನವಿ ಸಲ್ಲಿಸಲಾಯಿತು.
ಬಿಲ್ಲವ ಸಮಾಜದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಅಭಿವೃದ್ಧಿಯ ಉದ್ದೇಶದಿಂದ ಬಿಲ್ಲವ ಬ್ರಿಗೇಡ್ ಸ್ಥಾಪಿಸಲಾಗಿದ್ದು, ಸಮಾಜಮುಖಿ ಚಟುವಟಿಕೆಗಳ ಜತೆಗೆ ಸಮಾಜ ವಿರೋಧಿ ಕೃತ್ಯಗಳ ವಿರುದ್ಧ ಹೋರಾಟ ನಡೆಸುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಲಾಯಿತು.
ಸಂಘಟನೆಯ ಪ್ರಥಮ ಕಾರ್ಯಯೋಜನೆಯಾಗಿ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ರೈತ ನಾಯಕ ಉಬಾರ್ ಮಂಜ ಬೈದ್ಯ ಅವರ ಸ್ಮರಣಾರ್ಥ ಉಪ್ಪಿನಂಗಡಿಯಲ್ಲಿ ಪುತ್ಥಳಿ ನಿರ್ಮಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬಿಲ್ಲವ ಬ್ರಿಗೇಡ್ ಮುಂದಾಳುಗಳಾದ ಜಯಪ್ರಕಾಶ್ ಬದಿನಾರು, ರಂಜಿತ್ ಸುವರ್ಣ ಪೆರಿಯಡ್ಕ, ಚಂದ್ರಶೇಖರ ಕಲ್ಲಗುಡ್ಡೆ, ಹರೀಶ್ ಬಂಗೇರ ಪಡ್ಡಾಯೂರು, ಕಿರಣ್ ಕುಮಾರ್ ಬಸಂತಕೋಡಿ, ಪ್ರವೀಣ್ ಸಣ್ಣಗುತ್ತು ಅಳಕೆ, ಎಲ್ಯಣ್ಣ ಪೂಜಾರಿ ಮೈರಲ್ಕ, ಮೋಹನ್ ಗುರ್ಜಿನಡ್ಕ, ಅಣ್ಣಿ ಪೂಜಾರಿ ಕೆಮ್ಮಾಯಿ, ಕೇಶವ ಸುವರ್ಣ ಮೇರ್ಲ, ಶಶಿಧರ ಪೂಜಾರಿ ಕಜೆ ಸೇಡಿಯಾಪು, ನವೀನ್ ಕರ್ಕೇರ ಬಲ್ನಾಡು, ಹರೀಶ್ ಕರ್ಕೇರ ನಿಡ್ನಳ್ಳಿ, ಪೃಥ್ವಿರಾಜ್ ಗೆಣಸಿನಕುಮೇರು, ಗೌತಮ್ ಕೆ.ಎಸ್. ನೆಕ್ಕಿಲಾಡಿ, ಬಾಲಕೃಷ್ಣ, ವಾಸು ಪೂಜಾರಿ ದರ್ಬೆ, ಭವಿತ್, ರೇಖಾ, ಸುಮತಿ, ಸುನಿತಾ, ಚೇತನಾ, ಹರಿಣಾಕ್ಷಿ, ಯಶೋದ ಮತ್ತಿತರರು ಉಪಸ್ಥಿತರಿದ್ದರು.







