ಒಂದೆಡೆ ನಮ್ಮ ಮಗಳು ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಲಿ ಎಂದಿದ್ದ ಸಿಯಾ ಗೋಯಲ್ ಪೋಷಕರು ಇನ್ನೊಂದೆಡೆ ಮಗಳ ಪರ ವಾದ ಮಂಡಿಸಲು ಸುಪ್ರೀಂಕೋರ್ಟ್ ನ ಖ್ಯಾತ ವಕೀಲರನ್ನೇ ನೇಮಕ ಮಾಡಿದ್ದಾರೆ ಎಂದು ಸಾರ್ವಜನಿಕರು ಟೀಕೆ ಮಾಡುತ್ತಿದ್ದಾರೆ. ಪುಣೆಯ ಯುವ ಉದ್ಯಮಿ ಕೇತನ್ ಅಗರ್ವಾಲ್ ಕೇಸ್ ನಲ್ಲಿ ಭಾವೀ ಪತ್ನಿ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಲೋಹಗಢ ಕೋಟೆಯ 400 ಅಡಿ ಕಂದಕಕ್ಕೆ ಕೇತನ್ ನನ್ನು ಸಿಯಾ ಮತ್ತು ಚೇತನ್ ಸೇರಿಕೊಂಡು ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪವಾಗಿದೆ.ಮಗಳ ಬಗ್ಗೆ ಆರೋಪ ಬರುತ್ತಿದ್ದಂತೇ ತಂದೆ ಹಾರ್ಟ್ ಅಟ್ಯಾಕ್ ಎಂದು ಆಸ್ಪತ್ರೆಗೆ ಸೇರಿಕೊಂಡಿದ್ದರು. ಆಸ್ಪತ್ರೆಗೆ ಬಂದಿದ್ದ ಕೆಲವು ಮಾಧ್ಯಮಗಳು ಸಿಯಾ ತಂದೆ ಮತ್ತು ತಾಯಿಯನ್ನು ಮಾತನಾಡಿಸಿದ್ದಾರೆ. ಈ ವೇಳೆ ತಾಯಿ ಮತ್ತು ತಂದೆ ಸಿಯಾ ಒಂದು ವೇಳೆ ತಪ್ಪು ಮಾಡಿದ್ದರೆ ಅವಳನ್ನು ಗಲ್ಲಿಗೆ ಹಾಕಲಿ ಅಥವಾ ಅದೇ ಜಾಗದಿಂದ ಆಕೆಯನ್ನು ಕೆಳಕ್ಕೆ ತಳ್ಳಿ ಸಾಯಿಸಲಿ ಎಂದೆಲ್ಲಾ ಹೇಳಿಕೆ ನೀಡಿದ್ದರು.ಆದರೆ ಇದೀಗ ಸಿಯಾ ಪರ ವಾದ ಮಂಡಿಸಲು ಸುಪ್ರೀಂಕೋರ್ಟ್ ನ ಖ್ಯಾತ ಮತ್ತು ಹಿರಿಯ ವಕೀಲ ಆಶುತೋಷ್ ಶ್ರೀವಾಸ್ತವ ಅವರನ್ನು ನೇಮಕ ಮಾಡಲಾಗಿದೆ. ಇದರ ಬಗ್ಗೆ ನೆಟ್ಟಿಗರು ಟೀಕೆ ಮಾಡಿದ್ದಾರೆ. ಮಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಪೋಷಕರೇ ಹೇಳಿದ್ದರು. ಹಾಗಿದ್ದರೆ ಈಗ ಆಕೆಯ ಪರ ವಾದ ಮಂಡಿಸಲು ಇಷ್ಟು ದೊಡ್ಡ ವಕೀಲರನ್ನು ನೇಮಿಸಿದವರು ಯಾರು? ಎಂದು ಟೀಕೆ ಮಾಡಿದ್ದಾರೆ. ಹೀಗಾಗಿ ಸಿಯಾ ಲವ್ ಅಫೇರ್ ಕುಟುಂಬದವರಿಗೆ ಮೊದಲೇ ಗೊತ್ತಿರಬಹುದು. ಅದಕ್ಕಾಗಿಯೇ ತರಾತುರಿಯಲ್ಲಿ ಮಗಳ ಮದುವೆ ಮಾಡಲು ಹೊರಟಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ







