ಪುತ್ತೂರು: ದರ್ಬೆಯ ಲಿಟ್ಲ್ ಫ್ಲವರ್ ಶಾಲೆಯ 14ರ ವಯೋಮಾನದ ಬಾಲಕಿಯರ ಕಬಡ್ಡಿ ತಂಡವು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಸತತ 8ನೇ ಬಾರಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.ಬೆಳ್ತಂಗಡಿ ತಾಲೂಕಿನ ಬಡಕಾರಂದೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆಯ ತಂಡ ಈ ಸಾಧನೆ ಮಾಡಿದೆ.ತಂಡದಲ್ಲಿ ಉಮ್ಮುನಿಧಾ, ಉದ್ವಿತಾ, ರಕ್ಷಾ, ಶೃಜ್ಞಾ ಪಿ. ಆಳ್ವ, ಖುಶಿ, ಯಶಸ್ವಿ, ಪಿ.ಯು.ಆರ್. ಪರಿಣಿತ, ಪ್ರಣಮ್ಯ ರೈ, ಹರ್ಷಿತ, ವೆಂಕಟೇಶ್ ಬುರುಡಿ, ತನ್ವಿಕಾ, ಇಂಚರ, ದೃತಿ ಕೆ. ಹಾಗೂ ಚೈತಾಲಿ ಭಾಗವಹಿಸಿದ್ದರು.ಉಮ್ಮುನಿಧಾ ಅವರಿಗೆ ಸವ್ಯಸಾಚಿ ಆಟಗಾರ್ತಿ ಹಾಗೂ ದಿಶಾ ಅವರಿಗೆ ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಲಭಿಸಿದೆ.ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಐರಿನ್ ವೇಗಸ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ತಂಡಕ್ಕೆ ತರಬೇತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!