ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಆಯ್ಕೆಯಾದ ಸಹಕಾರಿ ಧುರೀಣ ಶಶಿಕುಮಾರ್ ರೈ ಬಾಳ್ಕೊಟ್ಟುರ ಅವರನ್ನು ಬಡಗನ್ನೂರು ಜನಸೇವಾ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.

ಫೌಂಡೇಶನ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಹಾಗೂ ಪದಾಧಿಕಾರಿಗಳಾದ ರವಿರಾಜ ರೈ ಸಜಂಕಾಡಿ, ಆಲಿ ಕುಂಟ್ ಕಾವುಂಜ, ಮಹಾಲಿಂಗ ಪಾಟಾಳಿ ಕುದ್ಮಾಡಿ, ಇಬ್ರಾಹಿಂ ಬಡಗನ್ನೂರು, ರತ್ನಾಕರ ಶೆಟ್ಟಿ ಕುದ್ದಾಡಿ, ಆಬಿದ್ ಕುಕ್ಕಾಜೆ, ಅಬ್ದುಲ್ ನಾಸಿರ್ ಕಾವುಂಜ, ಶಾಹುಲ್ ಹಮೀದ್ ಕಾವುಂಜ ಹಾಗೂ ಜುನೈದ್ ಅನ್ವರ್ ಬಡಗನ್ನೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!