ಮಂಗಳೂರು ; ಯುವತಿಯರು ನಡೆದುಕೊಂಡು ಹೋಗುತ್ತಿದ್ದ ಬಂದ ವ್ಯಕ್ತಿಯೊಬ್ಬ ನಿಮಗೆ ಹಣ ಕೊಡುತ್ತೇನೆ, ನನ್ನ ಜೊತೆ ಬರುತ್ತೀರಾ ಎಂದು ಕೇಳಿದ್ದಾನೆ.. ಅಸಭ್ಯವಾಗಿ ವರ್ತನೆ ಮಾಡಿ ಸೆಕ್ಸ್‌ ಅಫರ್‌ ಕೊಟ್ಟಿದ್ದಾನೆ.. ಇದ್ರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಆರೋಪಿಯನ್ನು ಹಿಡಿದು ಚೆನ್ನಾಗಿ ತದುಕಿದ್ದಾರೆ.

ಬಾಯಿ, ಮೂಗಲ್ಲಿ ರಕ್ತಬರುವಂತೆ ಹೊಡೆದಿದ್ದಾರೆ.. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ..
ಮಂಗಳೂರು ನಗರದ ನವಭಾರತ್‌ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ.. ಬರ್ಮುಡಾ ಚೆಡ್ಡಿ ಹಾಗೂ ಟೀ ಶರ್ಟ್‌ ಧರಿಸಿದ್ದ ಯುವಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರಿಗೆ ಅಡ್ಡ ಬಂದಿದ್ದಾನೆ.. ಹಣ ಕೊಡುತ್ತೇನೆ ಬನ್ನಿ ಎಂದು ಅಸಭ್ಯವಾಗಿ ಕರೆದಿದ್ದಾನೆ.. ಆಗ ಯುವತಿಯರು ಆಕ್ರೋಶಗೊಂಡ ಆತನಿಗೆ ಚಳಿ ಬಿಡಿಸಿದ್ದಾರೆ.. ನಂತರ ಆರೋಪಿಯನ್ನು ಪಾಂಡೇಶ್ವರ ಮಹಿಳಾ ಪೊಲೀಸ್‌ ಠಾಣೆಗೆ ಒಪ್ಪಿಸಲಾಗಿದೆ..

Leave a Reply

Your email address will not be published. Required fields are marked *

Join WhatsApp Group
error: Content is protected !!