ಹತ್ತೂರ ಒಡೆಯನ ಊರಿನಲ್ಲಿ ಪ್ರಾರಂಭಗೊಳ್ಳುತ್ತಿರುವ ವಿಮಾನಯಾನ ತರಬೇತಿ ಸಂಸ್ಥೆ ಹೇಗಿರಲಿದೆ?

ಆಕಾಶದೆತ್ತರಕ್ಕೆ ಹಾರಲು ಇಚ್ಛಿಸುವ ಯುವ ಸಮೂಹಕ್ಕೆ ಇಲ್ಲಿದೆ ಒಂದು ಸುವರ್ಣಾವಕಾಶ

ಪುತ್ತೂರು: ಶ್ರೀಪ್ರಗತಿ ವಿಸ್ತಾರ ಕಾಲೇಜ್ ಫಾರ್ ಎವಿಯೇಷನ್ ಆ್ಯಂಡ್ ಮ್ಯಾನೇಜ್ ಮೆಂಟ್ ಅ.3 ರಂದು ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿರುವ ಮಾನ್ಯ ಕಟ್ಟಡದಲ್ಲಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಹೇಮಾಂಬಿಕ ಸುದರ್ಶನ್, ಉಪಾಧ್ಯಕ್ಷೆ ಹೇಮಲತಾ ಗೋಕುಲ್‌ನಾಥ್, ಕಾರ್ಯದರ್ಶಿ ಗೋಕುಲ್‌ನಾಥ್ ಪಿವಿ ಮತ್ತು ಕೋಶಾಧಿಕಾರಿ ಸುದರ್ಶನ್ ಮೂಡಬಿದ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಎಟಿಎ ಯಲ್ಲಿ ನೋಂದಾಯಿತ ಸಂಸ್ಥೆಯಾಗಿರುವ ಬೆಂಗಳೂರಿನ ಸೈ ಬರ್ಡ್ ಎವಿಯೇಷನ್‌ ಸಂಸ್ಥೆಯ ಅಧಿಕೃತ ಪ್ರಾಂಚೈಸಿ ಸಂಸ್ಥೆ ಯಾಗಿರುವ ಶ್ರೀಪ್ರಗತಿ ವಿಸ್ತಾರ
ಏವಿಯೇಷನ್ ಶಾಲೇಜು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ವಿಮಾನಯಾನ ತರಬೇತಿಗೆ ಬೇಕಾದ ‘ಮಾಕ್’ ವಿಮಾನ ಕ್ಲಾಸ್ ರೂಂ ಸೇರಿದಂತೆ ಇನ್ನಿತರ ಎಲ್ಲಾ ಸೌಲಭ್ಯವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಅನುಭವ ಪಡೆದಿರುವ ನುರಿತ ಅಧ್ಯಾಪಕ ವೃಂದ ತರಬೇತಿ ನೀಡಲಿದ್ದು, ಆಕಾಶದೆತ್ತರಕ್ಕೆ ಹಾರಲು ಇಚ್ಚಿಸುವ ಯುವಸಮೂಹಕ್ಕೆ ರೆಕ್ಕೆಗಳನ್ನು ಕಟ್ಟಿಕೊಡಲಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಸ್ತು ಬದ್ಧವಾಗಿ ಆಸಕ್ತಿ ಇರುವ ವಿಭಾಗದಲ್ಲಿ ಪರಿಣಿತರನ್ನಾಗಿ ಮಾಡುವ ಮೂಲಕ ವಿಮಾನಯಾನ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳಿಗೆ ತನ್ನ ಅಭ್ಯರ್ಥಿಗಳನ್ನು ಶ್ರೀಪ್ರಗತಿ ವಿಸ್ತಾರ ಪರಿಚಯಿಸಲಿದೆ.

ವಿಮಾನಯಾನ ಸಂಸ್ಥೆಗಳಲ್ಲಿ ಹಾರಾಟ ಮಾತ್ರವಲ್ಲದೆ ವಿಪುಲ ಉದ್ಯೋಗಾವಕಾಶಗಳಿವೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಎರೋನಾಟಿಕಲ್ ಕ್ಷೇತ್ರ ಬೆಳೆದಂತೆ ಎವಿಯೇಷನ್ ಕ್ಷೇತ್ರವು ಬೆಳೆಯುತ್ತಾ ಬಂದಿದೆ, ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು ಅತೀವೇಗದ ಸಾಧನವಾಗಿರುವ ವಿಮಾನಯಾನ ಎಂದರೆ ವಿಮಾನಗಳ ಹಾರಾಟ, ಆಪರೇಶನ್, ಬಳಕೆ, ನಿರ್ವಹಣೆ ಮತ್ತು ನಿಯಂತ್ರಣವಾಗಿದ್ದು ಈಗ ಈ ಕ್ಷೇತ್ರ ಬಹಳಷ್ಟು ವಿಸ್ತಾರಗೊಂಡು ಹಲವು

ಉದ್ಯೋಗಾವಕಾಶಗಳನ್ನು ತೆರೆದಿಟ್ಟಿದೆ. ಕೇಂದ್ರ ಸರ್ಕಾರ ಉಡಾನ್ ಯೋಜನೆಯನ್ನು ಜಾರಿಗೊಳಿಸಿದ ಬಳಿಕ ವಿವಿಯೇಷನ್ ಕ್ಷೇತ್ರ ಬಹಳಷ್ಟು ವಿಸ್ತಾರಗೊಂಡಿದೆ ಎಂದೇ ಹೇಳಬಹುದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಾಗಿದ್ದು ನಿರುದ್ಯೋಗ ಪ್ರಮಾಣ ಒಂದಿಷ್ಟು ಕಡಿಮೆಯಾಗುವಲ್ಲಿ ಸಹಕಾರಿಯಾಗಿದೆ.

VISTA

ವಿಮಾನಯಾನ ಕ್ಷೇತ್ರದಲ್ಲಿ ಆಡಳಿತ, ಲೆಕ್ಕಪತ್ರ, ಮಾನವಸಂಪನ್ಮೂಲ, ಅತಿಥಿ ಸತ್ಕಾರ, ಗಗನಸಖ, ಟಿಕೆಟ್ ಬುಕ್ಕಿಂಗ್, ಟಿಕೆಟ್ ತಪಾಸಣೆ, ಬೋರ್ಡಿಂಗ್ ಪಾಸ್, ಲಗೇಜ್ ನಿರ್ವಹಣೆ, ಮಾ ಪ್ರಯಾಣಿಕರ ಸುರಕ್ಷೆ, ಪ್ರಯಾಣಿಕರಿಗೆ
ಫೈಟ್ ಆಹಾರ ಪಾನೀಯ ವ್ಯವಸ್ಥೆ,  ಹೋಟೆಲ್ ವ್ಯವಸ್ಥೆ, ಕಾರ್ಗೋನಿರ್ವಹಣೆ ಹೀಗೆ ಹಲವಾರು ವಿಭಾಗದಲ್ಲಿ ಉದ್ಯೋಗಾವಕಾಶವಿದ್ದು, ಪ್ರತ್ತೂರಿನಲ್ಲಿ ಆರಂಭಗೊಳ್ಳಲಿರುವ ಶ್ರೀಪ್ರಗತಿ ವಿಸ್ತಾರ ಎವಿಯೇಷನ್ ಕಾಲೇಜ್ ಯುವಕ ಯುವತಿಯರ ಪಾಲಿಗೆ ಹೊಸ ಬೆಳಕು ಹರಿಸಲಿದೆ. ಹಿಂದಿಗಿಂತಲೂ ಹೆಚ್ಚು ವಿಸ್ತಾರವಾಗಿರುವ ವಿಮಾನಯಾನ ಕ್ಷೇತ್ರದ ಬೇಡಿಕೆಗೆ ತಕ್ಕಂತೆ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೇಟ್, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಶ್ರೀಪ್ರಗತಿ ವಿಸ್ತಾರ ಪರಿಚಯಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅ.3ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದು, ವಿದ್ಯಾರ್ಥಿಗಳು ಮತ್ತು ಹೆತ್ತವರು ಭಾಗವಹಿಸುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!