ಮುಂಬೈ : ಮಹಾರಾಷ್ಟ್ರದ ಡೆಪ್ಯುಟಿ ಸ್ಪೀಕರ್ ಹಾಗೂ ಅಜಿತ್ ಪವಾರ್ ಬಣದ ಶಾಸಕ ನರಹರಿ ಜಿರ್ವಾಲ್ ಸಚಿವಾಲಯದ ಕಟ್ಟಡಡಿಂದ ಜಿಗಿದಿರುವ ಘಟನೆ ನಡೆದಿದೆ.

ಸಚಿವಾಲಯದ ಕಟ್ಟಡದ ಮೂರನೇ ಮಹಡಿಯಿಂದ ನರಹರಿ ಜಿರ್ವಾಲ್ ಜಿದಿದಿದ್ದು, ಕೆಳಗೆ ನೆಟ್ ಅಳವಡಿಸಿದ್ದರಿಂದ ಅದರಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಬಚಾವ್ ಆಗಿದ್ದಾರೆ.

ಧಂಗಾರ್ ಸಮುದಾಯದ ಎಸ್ಟಿ ಮೀಸಲಾತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆ ನಡುವೆ ಈ ಘಟನೆ ನಡೆದಿದೆ.

ನರಹರಿಯವರು ಕಳೆದ ಎರಡು ದಿನಗಳಿಂದ ಸಿಎಂ ಏಕನಾಥ್ ಶಿಂಧೆ ಭೇಟಿಗೆ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸಾಧ್ಯವಾಗಿರಲಿಲ್ಲ. ಇಂದು ಕೂಡ ಸಿಎಂ ಭೇಟಿಗೆಂದು ಹಲವು ಶಾಸಕರು ಆಗಮಿಸಿದ್ದರು. ಈ ವೇಳೆಯೂ ಸಿಎಂ ಭೇಟಿಗೆ ಅವಕಾಶ ಸಿಕ್ಕಿಲ್ಲ. ಸಿಎಂ ಭೇಟಿಗೆ ಅವಕಾಶ ಸಿಗದ ಬೆನ್ನಲ್ಲೇ ತಮ್ಮದೇ ಸರ್ಕಾರದ ವಿರುದ್ಧವೇ ಘೊಷಣೆಗಳನ್ನು ಕೂಗಿದ ಶಾಸಕರು ಹಾಗೂ ನರಹರಿ ಸಚಿವಾಲಯದ ಕಟ್ಟಡದಿಂದ ಜಿಗಿದಿದ್ದಾರೆ.

ನೆಟ್ ನಲ್ಲಿ ಸಿಲುಕಿದ್ದ ಡೆಪ್ಯುಟಿ ಸ್ಪೀಕರ್ ನರಹರಿ ಸೇರಿದಂತೆ ಹಲವು ಶಾಸಕರನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದು, ಬಲೆಯಿಂದ ಹೊರಗೆ ಕರೆತದಿದ್ದಾರೆ. ಶಾಸಕರು ಹಾಗೂ ಡೆಪ್ಯುಟಿ ಸ್ಪೀಕರ್ ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!