ವಿಟ್ಲ: ಸಮೀಪದ ಮಂಗಿಲಪದವು ಬನಾರಿ ನಿವಾಸಿ ಅಬೂಬಕ್ಕ‌ರ್ ಸಿದ್ದೀಕ್ (30.ವ) ಎಂಬವರು ಅ.5ರಂದು ನಿಧನರಾದರು.

ವಿಟ್ಲ ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮೂಲತಃ ವಿಟ್ಲ ಸಮೀಪದ ಮೇಗಿನಪೇಟೆ ಕಾಟ್ರಸ್ ನಿವಾಸಿಯಾಗಿರುವ ಇವರು, ಪ್ರಸ್ತುತ ವಿಟ್ಲ ಸಮೀಪದ ಮಂಗಿಲಪದವು ಬಾಬಟ್ಟ ಬನಾರಿ ನಿವಾಸಿಯಾಗಿದ್ದಾರೆ.

ಮಂಗಿಲಪದವು ಬಾಬಟ ಬನಾರಿ ನಿವಾಸಿ ಅಚ್ಚ ಎಂಬವರ ಪುತ್ರ ಅಬುಬಕ್ಕರ್ ಸಿದ್ದೀಕ್ ಅವರು ಎರಡು, ಮೂರು ದಿನಗಳ ವಿಪರೀತ ಜ್ವರದಿಂದಾಗಿ ಇಂದು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!