
ಗಳೂರು: ಧರ್ಮ ದ್ವೇಷದ ಭಾಷಣ ಆರೋಪದಡಿ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ್ (Arun Ullal) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಈತ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವಂತಹ ಭಾಷಣ ಮಾಡಿದ್ದಾನೆ ಎಂಬ ಆರೋಪ ಈತನ ಮೇಲೆ ಕೇಳಿ ಬಂದಿತ್ತು.
ಅಲ್ಲದೆ ಈತನ ಭಾಷಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಪೊಲೀಸ್ ಇಲಾಖೆಯು ಕಾನೂನು ಕ್ರಮಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿ ಬಂದಿತ್ತು.
ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ 66(C) IT ACT AND 196, 351 (BNS), 2023 ರಂತೆ ಧರ್ಮ ದ್ವೇಷದ ಭಾಷಣ ಮಾಡಿದ ಅರೋಪದಡಿ ಡಾ. ಅರುಣ್ ಉಳ್ಳಾಲ್ ವಿರುದ್ದ ಎಫ್‌ಐಆರ್ ದಾಖಲಾಗಿದೆ.






