ಗಳೂರು: ಸಾಮಾಜಿಕ, ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಹಾಜಿ ಬಿಎಂ ಮುಮ್ತಾಝ್ ಅಲಿ ನಿಧನಕ್ಕೆ ಸಂತಾಪ ಸೂಚಿಸಲು ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳುವ ಸಲುವಾಗಿ ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಅವರು ಅ.9ರಂದು ಬೆಳಗ್ಗೆ 11.30ಕ್ಕೆ ಕೃಷ್ಣಾಪುರ, ಚೊಕ್ಕಬೆಟ್ಟು ಮುಮ್ತಾಝ್ ಅಲಿ ಅವರ ತರವಾಡು ಮನೆಗೆ ಆಗಮಿಸಲಿದ್ದಾರೆ.

ಮೃತರ ಮೂರನೇ ದಿನದ ಪ್ರಾರ್ಥನಾ ಸಂಗಮಕ್ಕೆ ನೇತೃತ್ವ ನೀಡಲಿರುವ ಅವರು ಬಳಿಕ ಮುಮ್ತಾಝ್ ಅಲಿ ಅಧ್ಯಕ್ಷರಾಗಿದ್ದ, ತಾನು ಮುಖ್ಯ ಪೋಷಕ ಆಗಿರುವ ಕಾಟಿಪಳ್ಳ ‘ಮಿಸ್ಬಾಹ್ ನಾಲೆಜ್ ಫೌಂಡೇಶನ್’ ನ ವಿಶೇಷ ಸಭೆಗೆ ನೇತೃತ್ವ ಕೊಡಲಿದ್ದಾರೆಂದು ಮಿಸ್ಬಾಹ್ ಸಮೂಹ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!