
ಶಿಕ್ಷಕರು (Teachers Fight) ಮಕ್ಕಳಿಗೆ ಆದರ್ಶವಾಗಿರಬೇಕು. ಆದರೆ ಮಕ್ಕಳ ಎದುರೇ ಶಿಕ್ಷಕರು ಜಗಳ ಮಾಡಿಕೊಂಡರೆ ಹೇಗೆ? ಇದೀಗ ಇಂತಹ ವಿಡಿಯೋವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ರಜೆಗಾಗಿ ಕಿರಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಬ್ಬರು ಮಕ್ಕಳು, ವಿದ್ಯಾರ್ಥಿಗಳ ಎದುರು ಜಗಳ ಮಾಡಿಕೊಂಡ ಘಟನೆ ನಡೆದಿದೆ.
ಸುತ್ತಮುತ್ತ ತರಗತಿ ನಡೆಯುತ್ತಿದೆ ಎಂಬುದನ್ನೂ ಗಮನಿಸದೆ ಶಿಕ್ಷಕರು ಈ ರೀತಿ ಜಗಳ ಮಾಡಿರುವುದು ನೋಡಿ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ.
ರಜೆಯ ವಿಚಾರದಲ್ಲಿ ಶಿಕ್ಷಕರಿಬ್ಬರ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳಾ ಶಿಕ್ಷಕಿ ಪುರುಷ ಸಹೋದ್ಯೋಗಿಯ ಕಾಲರ್ ಹಿಡಿದು ಜಗಳ ಮಾಡುತ್ತಿರುವುದನ್ನು ಕಾಣಬಹುದು. ಉಳಿದ ಇಬ್ಬರು ಅವರಿಬ್ಬರನ್ನು ಬಿಡಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಶಿಕ್ಷಕಿಯು ಶಿಕ್ಷಕನ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದು, ಆತನ ಅಂಗಿಯನ್ನು ಹರಿದು ಹಾಕಿದ್ದಾಳೆ. ಹಲವಾರು ಮಂದೀ ಇವರನ್ನು ತಡೆಯಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಇವರಿಬ್ಬರ ಜಗಳ ಕೊನೆ ಕಾಣದೇ ಇದ್ದರೂ ಸಾಕಷ್ಟು ಹೊತ್ತು ಜಗಳ ಮಾಡಿದ ಬಳಿಕ ಮಹಿಳೆ ಕೊನೆಗೆ ಸಿಟ್ಟಿನಿಂದ ಅಲ್ಲಿಂದ ಹೋರಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವರು ನೀವು ಮಕ್ಕಳಿಗೆ ಮಾದರಿಯಾಗಿರಬೇಕು,ನೀವೇ ಹೀಗಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.






