ಪುತ್ತೂರು : ಜಿಲ್ಲೆಯಾದ್ಯಂತ ಮನೆಮಾತಾಗಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವಿನೂತನ ಸ್ಪರ್ಧೆ ನಡೆಸಿದ್ದು, ‘ಗೋಲ್ಡನ್ ಗರ್ಲ್ಸ್ ಆಫ್ ಜಿ.ಎಲ್’ ಸ್ಪರ್ಧೆಯಲ್ಲಿ  ರೋಶನಿ ಗೌಡ ಪ್ರಥಮ ಸ್ಥಾನ ಪಡೆದಿದ್ದಾರೆ.

ಜಿ.ಎಲ್ ವನ್ ಮಾಲ್ ನಲ್ಲಿ ಅ.13ರಂದು ನಡೆದ ಸ್ಪರ್ಧೆಯಲ್ಲಿ
ಸಾಂಪ್ರದಾಯಿಕ ಸೀರೆ ಉಟ್ಟುಕೊಂಡು ಪ್ರಾಚಿ, ಪಾರ್ಥ, ಗ್ಲೋ ಜ್ಯೂವೆಲ್ಲರಿ ಧರಿಸಿ 20 ರೂಪದರ್ಶಿಗಳು  ರ್ಯಾಂಪ್ ವಾಕ್ ನಡೆಸಿದರು. ಸುಮಾರು 1000 ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ 20 ರೂಪದರ್ಶಿಗಳು ಫೈನಲ್ ಪ್ರವೇಶ ಪಡೆದಿದ್ದರು.

ತೀರ್ಪುಗಾರರು ಅಂಕ ನೀಡಿ ಸ್ಪರ್ಧಿಗಳಲ್ಲಿ ವಿಜೇತರ ಆಯ್ಕೆ ನಡೆಸಿದರು. ರೋಶನಿ ಗೌಡ ಪ್ರಥಮ ಸ್ಥಾನ , ದ್ವಿತೀಯ ಬಹುಮಾನವನ್ನು ಅನುಷಾ ಮ್ಯಾಥ್ಯು,  ರಶ್ಮಿತಾ ರಾವ್ ತೃತೀಯ ಬಹುಮಾನ ಪಡೆದುಕೊಂಡರು.

ಜಿ.ಎಲ್ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಬಲರಾಮ ಆಚಾರ್ಯ,  ರಾಜಿ ಬಲರಾಮ ಆಚಾರ್ಯ , ಲಕ್ಷ್ಮೀಕಾಂತ್ ಆಚಾರ್ಯ, ವೇದಾ ಲಕ್ಷ್ಮೀಕಾಂತ್ ಸುಧನ್ವ ಆಚಾರ್ಯ , ಮೇಘಾ ಸುಧನ್ವ ಸಹಿತ ನೂರಾರು ಗ್ರಾಹಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!