ಪುತ್ತೂರು : ಪ್ರತಿಷ್ಠಿತ ವಸ್ತ್ರ ಮಳಿಗೆ ಕೋರ್ಟ್‌ ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ ರೂಂನಲ್ಲಿ ‘ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವ’ದಲ್ಲಿ ಅಮೋಘ ಡಿಸ್ಕೌಂಟ್ ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶದಲ್ಲಿ ಪ್ರಥಮ ವಾರದ ಡ್ರಾ ಅ.14ರಂದು ಮಳಿಗೆಯಲ್ಲಿ ನಡೆಯಿತು.

ಸವಿತಾ ಬಾಲಕೃಷ್ಣ ಕಲ್ಲಾರೆ ಪ್ರಥಮ ಬಹುಮಾನದ ಡ್ರಾ ನಡೆಸಿಕೊಟ್ಟರು. ಇತರ ಬಹುಮಾನಗಳ ಡ್ರಾವನ್ನು ಮಕ್ಕಳು ನಡೆಸಿಕೊಟ್ಟರು.

ಮಳಿಗೆಯ ಮ್ಯಾನೇಜರ್ ಸಂಜಯ್ ಕಾಮತ್ ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

ಅಶ್ವಿನಿ(20) ಪ್ರಥಮ ಬಹುಮಾನ ರೆಫ್ರಿಜರೇಟರ್, ಸಚಿನ್ ವಗ್ಗ(17) ದ್ವಿತೀಯ ಬಹುಮಾನ ಕುಶನ್, ಕಾವ್ಯ ಸೂರಿಕುಮೇರು (100) ತೃತೀಯ ಬಹುಮಾನ 32 ಇಂಚು ಟಿವಿ ವಿಜೇತರಾದರು.

ಜಸ್ವಿ ಎಸ್. ಆರ್ ಹಳೆನೇರಂಕಿ (379), ಝಯನ್ ಬೆಟ್ಟಂಪಾಡಿ (640), ವೈಷ್ಣವೀ ಸವಣೂರು (736), ರುಕ್ಷಯ್ಯ ದಾಸ್ ಸುಳ್ಯ (198), ಜಶ್ವಿನ್ ಪೂಜಾರಿ(132), ಶಶಿಕಲಾ ಗೋಳಿತೊಟ್ಟು (366), ವಿಹಾ ರೈ ಪೆರ್ಲಂಪಾಡಿ (267), ಸೆಪಿನ ಕಾಣಿಯೂರು(327) ಹಾಗೂ ಹರೀಶ್ ರೈ ಸಾರಕೆರೆ (483) ಆಕರ್ಷಕ ಬಹುಮಾನ ಪಡೆದುಕೊಂಡರು.

ಆಫರ್‌ಗಳ ಬಿಗ್‌ ಬಾಸ್ ರಾಧಾಸ್ ಉತ್ಸವದಲ್ಲಿ ಶಾಪ್ ವಿನ್ ವಿಶೇಷ ಕೊಡುಗೆಗಳನ್ನು ನೀಡಲಾಗುವುದು. ಜವುಳಿ ಖರೀದಿಗೆ ಶೇ.15 ರಿಯಾಯಿತಿಯೊಂದಿಗೆ 3,999 ರೂ. ಜವುಳಿ ಖರೀದಿಗೆ ಗಿಫ್ಟ್ ಕೂಪನ್ ನೀಡಲಾಗುತ್ತಿದೆ.

ಪ್ರತಿವಾರ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಜೊತೆಗೆ 9 ಆಕರ್ಷಕ ಬಹುಮಾನಗಳು ಸೇರಿದಂತೆ ಒಟ್ಟು 12 ಬಹುಮಾನಗಳನ್ನು ನೀಡಲಾಗುತ್ತಿದೆ.

ವಿಜೇತರಿಗೆ ಪ್ರತಿವಾರ ವಿಭಿನ್ನ ಬಹುಮಾನಗಳನ್ನು ನೀಡಲಾಗುವುದು., ಪ್ರತಿ ತಿಂಗಳು ಬಂಪರ್ ಡ್ರಾ ನಡೆಯಲಿದ್ದು, ಅದೃಷ್ಟಶಾಲಿ ಗ್ರಾಹಕರಿಗೆ ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನ ಗೆಲ್ಲುವ ಅವಕಾಶವಿದೆ. ಈ ಕೊಡುಗೆಗಳು ಡಿ.31ರ ತನಕ ಮಾತ್ರವೇ ಇದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!