ಹೊಸದಿಲ್ಲಿ: ಗರ್ಭಿಣಿಯಾದ ಬಳಿಕ ವಿವಾಹಕ್ಕೆ ಒತ್ತಾಯಿಸಿದ ಹದಿಹರೆಯದ ಪ್ರೇಯಸಿಯನ್ನು ಪ್ರಿಯಕರನೇ ಹತ್ಯೆ ಮಾಡಿ ಶವವನ್ನು ಹೂತುಹಾಕಿದ ಪ್ರಕರಣ ರಾಷ್ಟ್ರ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ವಿವಾಹಕ್ಕೆ ಒಪ್ಪದ ಪ್ರಿಯಕರ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪಶ್ಚಿಮ ದೆಹಲಿಯ ನಂಗ್ಲೋಯಿ ನಿವಾಸಿಯಗಿದ್ದ ಸೋನಿ (19) ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, 6000 ಅನುಯಾಯಿಗಳನ್ನು ಹೊಂದಿದ್ದರು. ತಮ್ಮ ಹಾಗೂ ಪ್ರಿಯಕರ ಸಂಜು ಅಕಾ ಸಲೀಂ ಎಂಬಾತನ ಹಲವು ಫೋಟೊ ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದರು. ಯುವತಿಯ ಫೋಟೊಗಳನ್ನು ಸಂಜು ಕೂಡಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಎಂದು ಹೇಳಲಾಗಿದೆ.

ಸೋನಿಗೆ ಹೊಸ ಸ್ನೇಹಿತರು ಇದ್ದಾರೆ ಎನ್ನುವುದು ತಿಳಿದಿತ್ತು. ಆಕೆ ಮಾತನಾಡುವ ವೇಳೆ ಯಾರ ಜತೆ ಮಾತನಾಡುತ್ತಿರುವುದಾಗಿ ಪ್ರಶ್ನಿಸಿದರೆ ದೆವ್ವದ ಜತೆ ಎಂದು ಉತ್ತರಿಸುತ್ತಿದ್ದಳು ಎಂದು ಕುಟುಂಬದವರು ಹೇಳಿದ್ದಾರೆ.

ಸೋನಿ ಏಳು ತಿಂಗಳ ಗರ್ಭಿಣಿಯಾಗಿದ್ದಳು ಹಾಗೂ ಮದುವೆಯಾಗುವಂತೆ ಸಂಜುವನ್ನು ಒತ್ತಾಯಿಸುತ್ತಿದ್ದಳು. ಆದರೆ ಇದಕ್ಕೆ ಒಪ್ಪದ ಸಂಜು ಗರ್ಭಪಾತಕ್ಕೆ ಒತ್ತಾಯಿಸುತ್ತಿದ್ದ. ಪದೇ ಪದೇ ಇಬ್ಬರೂ ಜಗಳವಾಡುತ್ತಿದ್ದರು. ಸೋಮವಾರ ಕೆಲ ವಸ್ತುಗಳೊಂದಿಗೆ ಆಕೆ ಸಂಜು ವನ್ನು ಭೇಟಿ ಮಾಡುವ ಸಲುವಾಗಿ ಮನೆ ಬಿಟ್ಟು ಹೋಗಿದ್ದಳು.

ಸಂಜು ಹಾಗೂ ಇಬ್ಬರು ಸಹಚರರು ಆಕೆಯನ್ನು ಹರ್ಯಾಣದ ರೋಹ್ಟಕ್ ಗೆ ಕರೆದೊಯ್ದು ಹತ್ಯೆ ಮಾಡಿ ಹೂತು ಹಾಕಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಂಜು ಹಾಗೂ ಒಬ್ಬ ಸಹಚರನನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!