ಪುತ್ತೂರು : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು ಇಂದು ಅಧಿಕಾರ ಸ್ವೀಕರಿಸಿದರು.

ಸೆ.17ರಂದು ನಗರಸಭೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಲೀಲಾವತಿ ಅಣ್ಣು ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಬಾಲಚಂದ್ರ ಅವರ ಪ್ರಥಮ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ನಡೆಯಿತು.

ಸ್ಥಾಯಿ ಸಮಿತಿ ಸದಸ್ಯರಾಗಿ ಬಾಲಪ್ಪಪೂಜಾರಿ ಯಾನೆ ಸುಂದರ ಪೂಜಾರಿ ಬಡಾವು, ಗೌರಿ ಬನ್ನೂರು, ಪ್ರೇಮ್ ಕುಮಾರ್, ಮೋಹಿನಿ, ಕೆ.ಸಂತೋಷ್ ಕುಮಾರ್, ದೀಕ್ಷಾ ಪೈ, ಮನೋಹರ್, ಪೂರ್ಣಿಮ, ರಮೇಶ್ ರೈ ನೆಲ್ಲಿಕಟ್ಟೆಯವರನ್ನು ಆಯ್ಕೆ ಮಾಡಲಾಗಿತ್ತು.

ಬಾಲಪ್ಪಪೂಜಾರಿ ಯಾನೆ ಸುಂದರ ಪೂಜಾರಿ ಬಡಾವು ಅವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜ್ರೆಮಾರ್ ಸಹಿತ ಹಲವು ಪ್ರಮುಖರು ಈ ವೇಳೆ ಉಪಸ್ಥಿತರಿದ್ದು, ಅಭಿನಂದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!