ಗುಲ್ವಾಡಿಯ ಉದಯನಗರದ ಮನೆಯೊಂದರಲ್ಲಿ ಗಾಂಜಾವನ್ನು ದಾಸ್ತಾನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ದಂಪತಿಯನ್ನು ಕುಂದಾಪುರ ಗ್ರಾಮಾಂತರ (ಕಂಡ್ಲೂರು) ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉದಯ ನಗರ ನಿವಾಸಿಗಳಾದ ನಜರುಲ್ಲಾ ಖಾನ್‌ (40) ಹಾಗೂ ಆತನ ಪತ್ನಿ ಫಾತಿಮಾ (33) ಬಂಧಿತರು.

ಮನೆಯಲ್ಲಿದ್ದ 6.43 ಲಕ್ಷ ರೂ. ಮೌಲ್ಯದ 5 ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ತುಂಬಿಸಿಟ್ಟಿದ್ದ 8.37 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ ಟ್ರಾಲಿ ಸೂಟ್‌ಕೇಸ್‌, ಆರೋಪಿಗಳು ಗಾಂಜಾ ಮಾರಾಟ ಮಾಡಲು ಬಳಸುತ್ತಿದ್ದ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇವರಿಗೆ ಹಸೈನಾರ್‌ ಎಂಬಾತ ಗಾಂಜಾ ಪೂರೈಕೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!