ಪುತ್ತೂರು: ಪುತ್ತೂರು ಸಬ್ ರಿಜಿಸ್ಡರ್ ಕಚೇರಿಯಲ್ಲಿನ ಸರ್ವರ್ ಸಮಸ್ಯೆ ಹಾಗೂ ಇನ್ನಿತರ ಕೆಲವು ತಾಂತ್ರಿಕ‌ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡುವುದು ಹಾಗೂ ಇ ಖಾತೆ ವಿಳಂಬವಾಗುತ್ತಿರುವುದರ ಬಗ್ಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಅತೀಕ್ ರವರಿಗೆ ಶಾಸಕ ಅಶೋಕ್ ರೈ ಅವರು‌ಮನವಿ‌ಮಾಡಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರು.
ಗುರುವಾರ ವಿಧಾನ ಸೌಧ ಕಚೇರಿಯಲ್ಲಿ ಅವರನ್ನು‌ಭೇಟಿಯಾದ ಶಾಸಕರು ಸಬ್ ರಿಜಿಸ್ಡರ್ ಕಚೇರಿಯಲ್ಲಿನ ತಾಂತ್ರಿಕ‌ಸಮಸ್ಯೆ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಕಂದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಯಾವುದೇ ರಿಜಿಸ್ಟರ್ ಮಾಡಬೇಕಾದಲ್ಲಿ‌ಕಚೇರಿಯಲ್ಲೇ ಕುಳಿತು ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇ ಖಾತೆ ನೀಡುವಲ್ಲಿಯೂ ವಿಳಂಬವಾಗುತ್ತಿರುವ ಕಾರಣ ಗ್ರಾಮೀಣ ಭಾಗದ ಜನತೆ ಸಂಕಷ್ಟ‌ಎದುರಿಸುವಂತಾಗಿದೆ. ಈ ಸಮಸ್ಯೆ ಪುತ್ತೂರು,‌ಮಂಗಳೂರುಹಾಗೂ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ‌ಹೆಚ್ಚಾಗಿದ್ದು ಸರಕಾರ ತಕ್ಷಣ ಎಚ್ಚೆತ್ತು ಇದರ ಲ್ಲಿನ ಲೋಪ ದೋಷಗಳನ್ನು ಸರಿಪಡಿಸುವಂತೆ ಮನವಿ‌ಮಾಡಿದರು.

ಬಜೆಟ್‌ನಲ್ಲಿ‌ಮೆಡಿಕಲ್ ಕಾಲೇಜು ಸೇರಿಸಿ
ಮುಂದಿನ ಬಜೆಟ್ ನಲ್ಲಿ ಪುತ್ತೂರಿನಲ್ಲಿ‌ಆಗಬೇಕಾದ‌ಮೆಡಿಕಲ್ ಕಾಲೇಜಿನ ಬಗ್ಗೆ ಪ್ರಸ್ತಾಪ ಇಡುವಂತೆ ಮತ್ತು ಅದಕ್ಕೆ ಅನುದಾನ ಇಡುವಲ್ಲಿಯೂ ಮುತುವರ್ಜಿ ವಹಿಸುವಂತೆ ಕಾರ್ಯದರ್ಶಿ ಅತೀಕ್ ರವರಿಗೆ ಶಾಸಕರು‌ಮನವಿ ಸಲ್ಲಿಸಿದರು. ಪುತ್ತೂರಿನಲ್ಲಿ‌ಮೆಡಿಕಲ್ ಕಾಲೇಜು‌ನಿರ್ಮಾಣಕ್ಕೆ ಆಗ್ರಹಿಸಿ ಹೋರಾಟ ಪ್ರಾರಂಭವಾಗಿದ್ದು,ಪುತ್ತೂರಿಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಲ್ಲಿ ಪುತ್ತೂರಿನ ಜನತೆ ಮನವಿ‌ಮಾಡಿರುವುದನ್ನು ಕಾರದಯದರ್ಶಿ ಗಮನಕ್ಕೆ ತರಲಾಗಿದೆ.

 

Leave a Reply

Your email address will not be published. Required fields are marked *

Join WhatsApp Group
error: Content is protected !!