
ಮೂಡುಬಿದ್ರೆ:ರಾಷ್ಟಿಯ ಹೆದ್ದಾರಿ 169 ಹಾದು ಹೋಗುವ ಬನ್ನಡ್ಕದಲ್ಲಿ ನ.11ರ ಸೋಮವಾರ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ, ದ್ವಿಚಕ್ರ ವಾಹನ ಸವಾರ ಅಬ್ದುಲ್ ಘನಿ ಮೃತಪಟ್ಟರು.
ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಸಂದೀಪ್ ನಾಯಕ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅವರ ದೊಡ್ಡಮ್ಮ ಬೇಬಿ ನಾಯಕ್ ಅವರಿಗೆ ಗಂಭೀರ ಗಾಯಗಳಾಗಿವೆ.
ಅಬ್ದುಲ್ ಘನಿ ಅವರು ಬನ್ನಡ್ಕದಲ್ಲಿ ಗೂಡಂಗಡಿ ನಡೆಸುತ್ತಿದ್ದರು. ಹತ್ತಿರದ ಪೆಟ್ರೋಲ್ ಬಂಕ್ ನಿಂದ ತನ್ನ ವಾಹನದಲ್ಲಿ ಮುಖ್ಯರಸ್ತೆಯನ್ನು ತಲುಪುವಷ್ಟರಲ್ಲಿ ಕಾರ್ಕಳ ಕಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಗುದ್ದಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ತಿಂಗಳ ಹಿಂದೆ ಅದೇ ಪರಿಸರದಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದ ಪ್ರಕರಣ ನಡೆದಿತ್ತು.








