ಕಡಬ: ಮೊಬೈಲ್ ಅಂಗಡಿಯೊಂದಕ್ಕೆ ಗ್ರಾಹಕನ ಸೋಗಿನಲ್ಲಿ ಬಂದ ಖದೀಮ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟ ಮೊಬೈಲ್ ಫೋನನ್ನು ಎಗರಿಸಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೇಟೆಯಲ್ಲಿ ನಡೆದಿದೆ.
ನ.9ರ ಶನಿವಾರ ಸಾಯಂಕಾಲ ಈ ಘಟನೆ ನಡೆದಿದ್ದು ಪೊಬೈಲ್ ಫೋನನ್ನು ಕದ್ದು ಜೇಬಿಗಿಳೀಸುವ ದೃಶ್ಯ ಅಂಗಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮೊಬೈಲ್ ಅಂಗಡಿ ಮಾಲಕರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದು ಶಾಪ್ ನಲ್ಲಿ ಮತ್ತೋರ್ವ ಸಿಬ್ಬಂದಿ ಇನ್ನೊಂದು ಗ್ರಾಹಕರ ಜೊತೆ ಮಾತನಾಡುತ್ತಿದ್ದರು . ಆ ಸಂದರ್ಭ ಅಂಗಡಿಗೆ ಬಂದಿದ್ದ ಈ ಖದೀಮ ಎಲ್ಲೆಡೆ ನೋಡಿ ಸಮಯ ಸಾಧಿಸಿ ಮೊಬೈಲ್ ಕದ್ದು ಕಿಸೆಗೆ ಹಾಕಿಅಲ್ರಿಲಿಂದ ಎಸ್ಕೇಪ್ ಆಗಿದ್ದಾನೆ.
ಬಜಕರೆಯ ವ್ಯಕ್ತಿಯೊಬ್ಬರು ಸೇಲ್ ಮಾಡಲು ಪೋನ್ ನೀಡಿದ್ದು ಈ ಬಗ್ಗೆ ವಿಚಾರಿಸಲು ಬಂದಾಗ ಮೊಬೈಲ್ ಕಾಣೆಯಾಗಿರುವುದು ಗೊತ್ತಾಗಿದೆ. ಕೂಡಲೇ ಸಿಸಿಟಿವಿ ಪರಿಶೀಲಿಸಿದಾಗ ಬೊಳ್ಳೂರು ಸಮೀಪದ ಯುವಕ ಎಗರಿಸಿರುದು ಗೊತ್ತಾಗಿದೆ. ಸ್ಥಳೀಯರ ನೆರವಿನಿಂದ ಆತನ ಮನೆಗೆ ಹೋಗಿ ವಿಚಾರಿಸಿದಾಗ ಆತ ಇಲ್ಲದಿರುದನ್ನು ಕಂಡು ಪೊಲೀಸ್ ದೂರು ನೀಡುವ ಎಚ್ಚರಿಕೆ ನೀಡಿದ್ದರು.
ಎರಡು ದಿನದ ಬಳಿಕ ಕಡಬದ ಗೂಡಂಗಡಿಯೊಂದರಲ್ಲಿ ಮೊಬೈಲ್ ಇಟ್ಟು ಮಾಹಿತಿ ನೀಡಿ ಹೋಗಿರುವುದಾಗಿ ತಿಳಿದು ಬಂದಿದೆ. ಈತ ಕೆಲ ದಿನಗಳ ಹಿಂದೆ ಇನ್ನೊಂದು ಮೊಬೈಲ್ ಶಾಪ್ ನಿಂದ ಮೆಮೋರಿ ಕಾರ್ಡ್ ಕದ್ದಿದ್ದ, ಬೈಕ್ ಎಗರಿಸಿದ ಮತ್ತು ಮದುವೆ ಮನೆಯಲ್ಲೂ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.