ಪುತ್ತೂರು : ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಮಂಡಲಗಳ ಸಂಘಟನಾ ಪರ್ವದ ಕಾರ್ಯಗಾರ ನ. 16 ರಂದು ಜೈನ ಭವನದಲ್ಲಿ ನಡೆಯಿತು.

ಭಾರತೀಯ ಜನತಾ ಪಾರ್ಟಿ ಸಂಘಟನಾ ಪರ್ವದ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ರಾಜೇಶ್ ಕಾವೇರಿ ಕಾರ್ಯಾಗಾರವನ್ನು ಉದ್ಘಾಟಿಸಿ ಸಂಘಟನಾ ಪರ್ವದ ಕುರಿತು ಮಾತನಾಡಿದರು. ಸಂಘಟನೆ ಹಾಗೂ ಸದಸ್ಯತನ ದ ಬಗ್ಗೆ ಸಂಘಟನಾ ಪರ್ವದ ಜಿಲ್ಲಾ ಸಹ ಚುನಾವಣಾಧಿಕಾರಿ ವಿಕಾಸ್ ಪುತ್ತೂರು ಮಾಹಿತಿ ನೀಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ , ಪುತ್ತೂರು ಮಂಡಲ ಪ್ರಭಾರಿ ಸುನಿಲ್ ಆಳ್ವ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುತ್ತೂರು ಮಂಡಲ ಉಸ್ತುವಾರಿ ಪ್ರೇಮಾನಂದ ಶೆಟ್ಟಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಘಟನಾ ಪರ್ವದ ಸಹಯೋಗಿಯಾದ ಗಣೇಶ್ ಹೊಸಬೆಟ್ಟು ಸಂಘಟನಾ ಚಟುವಟಿಕೆಗಳನ್ನು ಯಾವ ರೀತಿ ಮಾಡಬೇಕು ಎಂಬುದನ್ನು ವಿವರಿಸಿದರು. 

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ ಶಕ್ತಿಕೇಂದ್ರಗಳಿಗೆ ಮಂಡಲದಿಂದ ಸಹಯೋಗಿಗಳನ್ನು  ಘೋಷಣೆ ಮಾಡಿದರು.ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಪ್ರಮುಖ ಹಿರಿಯರು , ಎರಡು ಮಂಡಲಗಳ ಪದಾಧಿಕಾರಿಗಳು , ವಿವಿಧ ಮೋರ್ಛಗಳ ಪದಾಧಿಕಾರಿಗಳು , ಮಹಾಶಕ್ತಿಕೇಂದ್ರ ದ ಅಧ್ಯಕ್ಷ , ಕಾರ್ಯದರ್ಶಿಗಳು , ಶಕ್ತಿಕೇಂದ್ರಗಳ ಪ್ರಮುಖರು , ಮಂಡಲದಿಂದ ನಿಯೋಜನೆಗೊಂಡ ಸಂಘಟನಾ ಸಹಯೋಗಿಗಳು ಸೇರಿದಂತೆ  ಪ್ರಮುಖ ಅಪೇಕ್ಷಿತರು ಉಪಸ್ಥಿತರಿದ್ದರು.  ಜಿಲ್ಲಾ ಕಾರ್ಯದರ್ಶಿ ಯಶಸ್ವಿನಿ ಶಾಸ್ತ್ರಿ ವಂದೇ ಮಾತರಂ ಗೀತೆ ಹಾಡಿದರು. ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ ಬಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು , ಪ್ರಶಾಂತ್ ನೆಕ್ಕಿಲಾಡಿ ವೇದಿಕೆಯಲ್ಲಿದ್ದ ಪ್ರಮುಖರಿಗೆ ಗೌರವಾರ್ಪಣೆ ನೀಡಿದರು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ವಂದನಾರ್ಪಣೆಗೈದರು. ಮಾಧ್ಯಮ ಪ್ರಕೋಷ್ಠ ಸಂಚಾಲಕ ಮಹೇಶ್ ರೈ ಕೇರಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!