ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಿತು. ಸದ್ಯ ರಾಜ್ಯದ ಜನ ಚಿತ್ತವೆಲ್ಲಾ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದತ್ತ ನೆಟ್ಟಿದೆ. ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumarsawamy) ಹಾಗೂ ಕಾಂಗ್ರೆಸ್ ಸ್ಪರ್ಧಿ ಸಿಪಿ ಯೋಗೇಶ್ವರ್ ನಡುವಿನ ಚುನಾವಣಾ ಯುದ್ಧದಲ್ಲಿ ಗೆಲುವವರು ಯಾರು ಎನ್ನುವ ಕುತೂಹಲ ಇಡೀ ರಾಜ್ಯದ ಜನರಿಗಿದೆ.
ಈ ಹಿಂದೆ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪರ ಪ್ರಚಾರ ಮಾಡಿದ್ದ ಸಚಿವ ಜಮೀರ್ ಅಹ್ಮದ್ ಅವರು ಕುಮಾರಸ್ವಾಮಿಯನ್ನು (HD Kumarsawamy) ಕರಿಯ ಅಂತ ಕರೆದು ವಿವಾದ ಕಿಡಿ ಹೊತ್ತಿಸಿದ್ರು. ಇದೀಗ ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ (Tejaswini Gowda) ಕುಮಾರಸ್ವಾಮಿ ವೈಯಕ್ತಿಕ ವಿಚಾರದ ಬಗ್ಗೆ ವಿವಾದದ ಹೇಳಿಕೆ ನೀಡಿದ್ದಾರೆ.
ಕರಿಯಾ, ಬಿಳಿಯ ಅನ್ನೋ ತಾರತಮ್ಯ ಇದೆ!
ಕಾಂಗ್ರೆಸ್ ವಕ್ತಾರೆ ತೇಜಸ್ವಿನಿ ಗೌಡ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಮೀಸಲಾತಿ ಬಗ್ಗೆ ಮಾತಾಡಿದ ತೇಜಸ್ವಿನಿ ಗೌಡ, ಎಲ್ಲರಿಗೂ ಸಮಾನ ಶಿಕ್ಷಣ, ಸವಲತ್ತು ಸಿಗುವವರೆಗೂ ಮೀಸಲಾತಿ ಇರಬೇಕು ಎಂದ್ರು. ಅಸ್ಪೃಶ್ಯತೆ ಇಂದಿಗೂ ಇದೆ. ನಾಚಿಯಾಗ್ಬೇಕು ಅಲ್ವಾ, ಸೂರ್ಯಯಾನ, ಸೂರ್ಯಯಾನಕ್ಕೆ ಹೋಗವವರ ದೇಶದಲ್ಲಿ ಅಸ್ಪೃಶ್ಯತೆ ಇದೆ. ಕರಿಯಾ, ಬಿಳಿಯ ಅನ್ನೋ ತಾರತಮ್ಯ ಕೂಡ ಇದೆ ಎಂದು ತೇಜಸ್ವಿನಿ ಗೌಡ ಹೇಳಿದೆ.
ರಾಧಿಕಾ ನಿಮ್ಮನ್ನು ಕರಿಯ ಅಂದ್ರೆ ನಿಮಗೇನು ಅನ್ಸೋದಿಲ್ವಾ?
ಮೀಸಲಾತಿ ಬಗ್ಗೆ ಮಾತಾಡ್ತಿದ್ದ ತೇಜಸ್ವಿನಿ ಗೌಡ ಅವರು ಕುಮಾರಸ್ವಾಮಿಯನ್ನು ಕರಿಯ ಎಂದ ಜಮೀರ್ ಹೇಳಿಕೆ ಬಗ್ಗೆ ಕೂಡ ಮಾತಾಡಿದ್ರು. ರಾಧಿಕಾ ಅವರು ಯಾವುದೋ ಕಾರ್ಯಕ್ರಮದಲ್ಲಿ ಮಾತಾಡ್ತಾ ಈ ಪದವನ್ನು ಬಳಸಿದ್ರು. ನೀವು ಅವರನ್ನು ಏನಂತ ಕರೀತೀರಾ ಎಂದು ಕೇಳಿದಾಗ ರಾಧಿಕಾ ಅವರು ಕರಿಯ ಅಂತ ಕರೆಯುವೆ ಅಂತ ಹೇಳಿಕೊಂಡಿದ್ರು. ಅವರು ಕರಿಯಾ ಅಂದ್ರೆ ಓಕೆ ಎನ್ನುವವರು, ಜಮೀರ್ ಕರಿಯಾ ಅಂದ್ರೆ ಯಾಕೆ ಅಂತಾರೆ ಇದು ಎಷ್ಟು ಸರಿ ಎಂದು ತೇಜಸ್ವಿನಿ ಗೌಡ ಟಾಂಗ್ ಕೊಟ್ಟಿದ್ದಾರೆ