ವಿಟ್ಲ: ಮನೆಯಲ್ಲಿ ಯಾರೂ ಇಲ್ಲದ ಸಮಯಕ್ಕೆ ಹೊಂಚು ಹಾಕಿ, ಹಾಡಹಗಲೇ ಮನೆಯ ಹಿಂಬದಿ ಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ ದೋಚಿದ ಘಟನೆ ಕೊಳ್ನಾಡು ಗ್ರಾಮದ ಮಂಕುಡೆ ಕಲ್ಕಾಜೆ ಗಣೇಶ್ ಶೆಟ್ಟಿ ಎಂಬವರ ಮನೆಯಲ್ಲಿ ನಡೆದಿದೆ.

ಗಣೇಶ್ ಶೆಟ್ಟಿ ಅವರ ಪತ್ನಿ ಪೇಟೆಗೆ ಹೋಗಿದ್ದ ಸಂದರ್ಭ ಕಳ್ಳರು ಪೂರ್ವಸಿದ್ಧತೆಯೊಂದಿಗೆ ಮನೆಗೆ‌ನುಗ್ಗಿ ಕೈಚಳಕ ತೋರಿಸಿದ್ದಾರೆ.

ಹಿಂಬದಿ ಬಾಗಿಲನ್ನು ಮುರಿದು ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!