ಭಾರತೀಯ ರೈಲ್ವೆ ಹಾಗೂ ಭಾರತೀಯ ಪೋಸ್ಟ್ ಎರಡು ಇಲಾಖೆಗಳು ಅತ್ಯಂತ ದೊಡ್ಡ ಹಾಗು ವಿಶ್ವದಲ್ಲೇ ತನ್ನ ಸಂಪರ್ಕಕ್ಕೆ ಹೆಸರು ಗಳಿಸಿವೆ. ದೇಶದ ಮೂಲೆ ಮೂಲೆಗೂ ಈ ಎರಡರಲ್ಲಿ ಒಂದು ಸೇವೆ ತಲುಪಿಯೇ ತಲುಪುತ್ತದೆ. ಇನ್ನು ಭಾರತದಲ್ಲಿ ರೈಲ್ವೆ ಸಂಪರ್ಕ ಎಂದರೆ ಜನರ ಜೀವನಾಡಿಯಾಗಿದೆ.

ಕಡಿಮೆ ಹಣದಲ್ಲಿ ದೂರ ಊರಿಗೆ ಪ್ರಯಾಣಿಸಲು ಈಗ ರೈಲ್ವೆಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅದರಲ್ಲೂ ರೈಲ್ವೆ ಮೇಲ್ದರ್ಜೆಗೆ ಏರಿಸುತ್ತಿರುವುದು ಇಲಾಖೆ ಮತ್ತಷ್ಟು ಸೇವೆ ನೀಡಲು ಸಹಕಾರಿಯಾಗುತ್ತಿದೆ.

ಭಾರತೀಯ ರೈಲ್ವೆ ಅತೀ ಹೆಚ್ಚು ಸೌಕರರ ಹೊಂದಿರುವ ಇಲಾಖೆ ಎಂಬ ಕೀರ್ತಿ ಪಡೆದಿದೆ. ಹಾಗೆ ರೈಲ್ವೆಯಲ್ಲಿ ನಿತ್ಯ ಲಕ್ಷ ಲಕ್ಷ ಜನರು ಪ್ರಯಾಣಿಸುತ್ತಾರೆ. ಹೀಗಾಗಿ ಭಾರತೀಯ ರೈಲ್ಬೆ ಈಗ ಹಳ್ಳಿ ಹಳ್ಳಿಗೂ ತಲುಪಿರುವ ಒಂದು ಸುಸರ್ಜಿತವಾದ ವ್ಯವಸ್ಥೆಯಾಗಿದೆ. ರೈಲ್ಬೆ ನಿಲ್ದಾಣಗಳು ಕೂಡ ಈಗ ವಿಶ್ವದ ಗಮನ ಸೆಳೆಯುತ್ತಿದೆ.

ಇಷ್ಟೆಲ್ಲಾ ಕೀರ್ತಿ ಹೊಂದಿರುವ ಈ ಭಾರತೀಯ ರೈಲ್ವೆಯು ಭಾರತದ ಇದೊಂದು ರಾಜ್ಯಕ್ಕೆ ಇಂದಿಗೂ ತಲುಪಲು ಆಗಿಲ್ಲ. ಹೌದು ಈ ರಾಜ್ಯದಲ್ಲಿ ಇಂದಿಗೂ ಒಂದೇ ಒಂದು ರೈಲ್ವೆ ನಿಲ್ದಾಣ ಕೂಡ ಇಲ್ಲ. ನಿಮಗೆ ಅಚ್ಚರಿಯಾಗಬಹುದು. ಭಾರತದಲ್ಲಿ ಮೂಲೆ ಮೂಲೆಗೂ ಹಬ್ಬಿರುವ ರೈಲ್ವೆ ಸಂಪರ್ಕ ಇಡೀ ರಾಜ್ಯವೊಂದರಲ್ಲಿ ಇಲ್ಲ ಎಂದರೆ ಹೇಗೆ? ಹೌದು ಹಿಮಾಲಯ ಶ್ರೇಣಿಯಲ್ಲಿ ಸಿಗುವಂತಹ ಪುಟ್ಟ ರಾಜ್ಯ ಸಿಕ್ಕಿಂನಲ್ಲಿ ಒಂದೇ ಒಂದು ರೈಲ್ವೆ ನಿಲ್ದಾಣವಿಲ್ಲ.

ಸಿಕ್ಕಿಂನಲ್ಲಿ ರೈಲ್ವೆ ನಿಲ್ದಾಣ ಏಕಿಲ್ಲ.?

ಹಿಮಾಲಯದ ಮಡಿಲಲ್ಲಿ ನೆಲೆಸಿರುವ ಹಾಗೂ ಪ್ರವಾಸಿಗರಿಗೆ ಸ್ವರ್ಗ ಎನಿಸುವಂತಹ ಈ ಸಿಕ್ಕಿಂನಲ್ಲಿ ರೈಲು ನಿಲ್ದಾಣಗಳಿಲ್ಲ. ಸಿಕ್ಕಿಂನ ಭೂ ಪ್ರದೇಶ ಹಾಗೂ ಅಲ್ಲಿನ ಹವಾಮಾನವು ರೈಲ್ವೆ ಸಂಚಾರಕ್ಕೆ ಸಹಕಾರಿಯಾಗಿಲ್ಲ. ಅಲ್ಲಿನ ರಸ್ತೆ ಮಾರ್ಗಗಳೇ ಅತ್ಯಂತ ಅಪಾಯಕಾರಿ ಹಾಗೂ ಸಾಹಸಮಯ ಯಾತ್ರೆಯಾಗಿ ಬದಲಾಗಿವೆ. ಕಡಿದಾದ ಕಣಿವೆಗಳು, ಕಿರಿದಾದ ಹಾದಿಗಳು ಮತ್ತು ಎತ್ತರದ ಪರ್ವತಗಳು ತುಂಬಿರುವುದರಿಂದ ಅಲ್ಲಿ ರೈಲ್ವೆ ಮಾರ್ಗ ನಿರ್ಮಿಸುವುದು ಅಸಾಧ್ಯ.

ಆದ್ರೆ ಈಗ ಪರಿಸ್ಥಿತಿ ಬದಲಾಗುವ ನಿರೀಕ್ಷೆ ಇದೆ. ಇದೇ ವರ್ಷ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊಟ್ಟ ಮೊದಲ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಆದ್ರೆ ಈ ನಿಲ್ದಾಣ ಪೂರ್ಣಗೊಂಡರೂ ಕೂಡ ಇಡೀ ರಾಜ್ಯದಲ್ಲಿ ಓಡಾಡಿದ ಮೊದಲ ರೈಲು ಎಂಬ ಹೆಗ್ಗಳಿಕೆ ಪಡೆಯಲಿದೆ. ಆದ್ರೆ ಇದೊಂದೇ ನಿಲ್ದಾಣ ಮಾತ್ರ ಅಲ್ಲಿ ನಿರ್ಮಿಸಲಾಗುತ್ತಿದ್ದು, ಇದೇ ಕೊನೆಯಾಗಬಹುದು.

ರೈಲ್ವೇ ನಿಲ್ದಾಣವಿಲ್ಲದ ಭಾರತದ ಏಕೈಕ ರಾಜ್ಯ ಸಿಕ್ಕಿಂ ಆಗಿರಬಹುದು, ಆದರೆ ಪ್ರಕೃತಿ ಸೊಬಗನ್ನು ಸವಿಯಲು ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಲೇ ಇರುತ್ತದೆ. ತ್ಸೋಮ್ಗೊ ಸರೋವರದಿಂದ ಖೆಚಿಯೋಪಾಲ್ರಿ ಸರೋವರ ಸೇರಿ ಹಲವು ಪ್ರವಾಸಿ ತಾಣಗಳನ್ನು ಸಿಕ್ಕಿಂ ತನ್ನಲ್ಲಿಟ್ಟುಕೊಂಡಿದೆ.

ಟಿಬೆಟಿಯನ್ನರು ಹೆಚ್ಚಾಗಿ ನೆಲೆಸಿರುವ ಈ ಪ್ರದೇಶದಲ್ಲಿ ಅವರ ದೇವಾಲಗಳು, ದೊಡ್ಡ ದೊಡ್ಡ ಮೂರ್ತಿಗಳ ನೋಡಬಹುದಾಗಿದೆ. ಹೀಗಾಗಿ ಪ್ರವಾಸಿಗರಿಂದ ಈ ರಾಜ್ಯ ತುಂಬಿರುತ್ತದೆ. ಇಷ್ಟಾದರು ಇದೊಂದೇ ರಾಜ್ಯದಲ್ಲಿ ಈಗ ರೈಲ್ವೆ ಸಂಪರ್ಕವಿಲ್ಲ. ಇರುವಂತಹ ರಸ್ತೆ ಮಾರ್ಗ ಕೂಡ ಕಡಿದಾಗಿ, ಅತ್ಯಂತ ಅಪಾಯಕಾರಿ ಎನ್ನುವಂತಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!