ಮಹಾರಾಷ್ಟ್ರ ಚುನಾವಣಾ ಫಲಿತಾಂಶ (Maharashtra Election Result) ಹೊರ ಬಿದ್ದಿದ್ದು, ಭಾರತೀಯ ಜನತಾ ಪಕ್ಷ (BJP) ನೇತೃತ್ವದ ಶಿವಸೇನೆ ಹಾಗೂ ಎನ್ಸಿಪಿಯ ಮಹಾಯುತಿ (Mahayuti) ಮೈತ್ರಿಕೂಟವು 2024ರ ವಿಧಾನಸಭಾ ಚುನಾವಣೆಯಲ್ಲಿ (Assembly Elections) ಅಭೂತಪೂರ್ವ ವಿಜಯವನ್ನು ದಾಖಲಿಸಿದೆ

ಎಲ್ಲ ಮತಗಟ್ಟೆ ಸಮೀಕ್ಷೆಗಳನ್ನು ಮೀರಿ ಗೆಲುವು ಸಾಧಿಸಿದೆ. ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳ ಪೈಕಿ ಮಹಾಯುತಿಯು 234 ಹಾಗೂ ಮಹಾ ವಿಕಾಸ್‌ ಆಘಾಡಿಯು (Maha Vikas Agadi) 50 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಇನ್ನುಳಿದಂತೆ ಇತರರು ನಾಲ್ಕು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದಾರೆ.

ಪ್ರತಿಷ್ಠೆಯ ಯುದ್ಧದಲ್ಲಿ ಸೋತ ಮಹಾ ನಾಯಕರು

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಹಾ ವಿಕಾಸ್ ಅಘಾಡಿ ಒಕ್ಕೂಟವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿತು. ಇದರ ಒಟ್ಟು ಸ್ಥಾನವು ಮಹಾಯುತಿಯ ಸ್ಥಾನದ ನಾಲ್ಕನೇ ಒಂದು ಭಾಗಕ್ಕಿಂತಲೂ ಕಡಿಮೆಯಾಗಿದೆ. ಈ ಸೋಲು ಶಿವಸೇನೆಯ ಯುಬಿಟಿ ನಾಯಕ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿಯ ಎಸ್‌ಪಿ ಬಣದ ಮುಖ್ಯಸ್ಥ ಶರದ್ ಪವಾರ್ ಅವರ ರಾಜಕೀಯ ಭವಿಷ್ಯದ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟುಹಾಕಿದೆ.ಇವರು ತಮ್ಮ ನಿಕಟವರ್ತಿಗಳ ನೇತೃತ್ವದ ಬಂಡಾಯದ ನಂತರ ತಮ್ಮ ಮೂಲ ಪಕ್ಷದ ಹೆಸರು ಮತ್ತು ಚಿಹ್ನೆಗಳನ್ನು ಕಳೆದುಕೊಂಡರು. ಮತ್ತು ಈ ಚುನಾವಣೆಗಳನ್ನು ಪ್ರತಿಷ್ಠೆಯ ಯುದ್ಧವಾಗಿ ಎದುರಿಸಿದರು, ಸಹ ಸೊಲ್ನನಪಿದ್ದಾರೆ.

ದ್ವಿಶತಕ ದಾಟಿದ ಮಹಾಯುತಿ

ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಒಟ್ಟು 234 ಸ್ಥಾನಗಳಲ್ಲಿ ದಿಗ್ವಿಜಯ ಸಾಧಿಸಿದೆ. ಬಿಜೆಪಿಯು 132 ಸ್ಥಾನಗಳೊಂದಿಗೆ ಪ್ರಸಕ್ತ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಹೊರ ಹೊಮ್ಮಿದೆ. ಶಿವಸೇನೆಯ ಶಿಂಧೆ ಬಣವು 57 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ನಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಬಣವು 41 ಸ್ಥಾನಗಳಲ್ಲಿ ಮತ್ತು ಜನಾತಿಪತಿಯ ಸಂರಕ್ಷಣಾ ಸಮಿತಿಯು 2, ರಾಜರ್ಷಿ ಶಾಹು ವಿಕಾಸ ಅಘಾಡಿಯು 1 ಮತ್ತು ರಾಷ್ಟ್ರೀಯ ಯುವ ಸ್ವಾಭಿಮಾನ್ ಪಾರ್ಟಿಯು 1 ಸ್ಥಾನಗಳಲ್ಲಿ ಜಯ ಸಾಧಿಸಿದೆ.

ಅಧಿಕೃತ ವಿರೋಧ ಪಕ್ಷವೂ ಆಗದ ಅಘಾಡಿ

ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್‌ ಆಘಾಡಿಯು ಕೇವಲ 50 ಸ್ಥಾನಗಳಲ್ಲಿ ವಿಜಯಿಯಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು 16, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ವು 20, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಶರದ್ಚಂದ್ರ ಪವಾರ್ ಬಣ) ವು 10, ಸಮಾಜವಾದಿ ಪಕ್ಷ 2, ರೈತರು ಮತ್ತು ಕಾರ್ಮಿಕರ ಪಕ್ಷ ಆಫ್ ಇಂಡಿಯಾ 1 ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) 1 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ.

ಸ್ವತಂತ್ರರು ಎರಡೂ ಸ್ಥಾನಗಳಲ್ಲಿ ಹಾಗೂ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮತ್ತು ರಾಷ್ಟ್ರೀಯ ಸಮಾಜ ಪಕ್ಷಗಳು ತಲಾ ಒಂದು ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.

ಮಹಾರಾಷ್ಟ್ರ ಮುಂದಿನ ಸಿಎಂ ಯಾರು?

ಈ ಕ್ಷಣದ ವ್ಯಕ್ತಿಯಾಗಿ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಹಾಗೂ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಗುರತಿಸಿಕೊಂಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿರು ಇವರಿಬ್ಬರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಶಿಂಧೆ ಅವರು ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಫಡ್ನವಿಸ್ ಅವರು ಮತ್ತೆ ಮುಖ್ಯಮಂತ್ರಿ ಸ್ಥಾನವನ್ನು ಮರಳಿ ಪಡೆಯುವ ಹಾದಿಯನ್ನು ನೋಡುತ್ತಿದ್ದಾರೆ, ಇವರಿಬ್ಬರ ಮಧ್ಯ ಅಜಿತ್ ಪವಾರ್ ಅವರು ಅದೃಷ್ಟದಿಂದ ಏನಾದರೂ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆಯೇ ಎಂದು ಆಸೆಗಣ್ಣು ಬಿಟ್ಟು ನೋಡುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!