ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 3 ಗ್ರಾ.ಪಂ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 3 ವಾರ್ಡ್ ಗಳಲ್ಲೂ ಕಾಂಗ್ರೆಸ್‌ ಜಯಭೇರಿ ಭಾರಿಸಿದೆ.

ವಿಧಾನಸಬಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಪುತ್ತೂರು ಬಿಜೆಪಿ ಪುಟಿದೇಳುವ ಲಕ್ಷಣಗಳು ಕ್ಷೀಣಿಸಿದೆ. ಶಾಸಕ ಅಶೋಕ್ ರೈ ನೇತೃತ್ವದ ಕಾಂಗ್ರೇಸ್ ಮೂರು ಕ್ಷೇತ್ರದ ಉಪಚುನಾವಣೆಯಲ್ಲೂ ಜಯಬೇರಿ ಭಾರಿಸಿದೆ.

ಪೆರ್ನೆ ಗ್ರಾ.ಪಂ ನ ಬಿಳಿಯೂರು ವಾರ್ಡ್ ನಂ.1 ಕಾಂಗ್ರೇಸ್‌ನ ನಳಿನಿ ರೋಹಿತಾಕ್ಷ 534 ಮತ ಪಡೆದರೆ ಬಿಜೆಪಿಯ ಪ್ರತಿಮಾ 383 ಮತ ಪಡೆದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ 131 ಮತಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಈ ಹಿಂದೆ ವಿಜೇತರಾಗಿದ್ದ ಕಾಂಗ್ರೇಸ್ ಅಭ್ಯರ್ಥಿ ಲೀನಾ ಮಸ್ಕರೇನಸ್ ವಿದೇಶಕ್ಕೆ ತೆರಳಿದ ಕಾರಣ ಈ ಚುನಾವಣೆ ನಡೆದಿತ್ತು. ಲೀನಾ ಮಸ್ಕರೇನಸ್ 72 ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಈ ಬಾರಿ ಗೆಲುವಿನ ಅಂತರ 131ಕ್ಕೆ ಹಿಗ್ಗಿದೆ

ಕೆದಂಬಾಡಿ ಗ್ರಾ.ಪಂನ ಒಂದು ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ 30 ಮತಗಳ ಅಂತರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೊಂತೆರೋ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಭಾಸ್ಕರ ರೈ ಮಿತ್ರಂಪಾಡಿಯವರ ನಿಧನದಿಂದ ಈ ಸ್ಥಾನ ತೆರವಾಗಿತ್ತು.

ಕಾಂಗ್ರೆಸ್ ನಿಂದ ಮೆಲ್ವಿನ್ ಮೊಂತೆರೋ, ಬಿಜೆಪಿಯಿಂದ ಮೋಹನ್ ತಿಂಗಳಾಡಿ ಹಾಗೂ ಎಸ್.ಡಿ.ಪಿ.ಐನಿಂದ ರಫೀಕ್ ನಂಜೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೋಂತೆರೋ, 272 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ. ಮೋಹನ್ 242 ಹಾಗೂ ಎಸ್ಸಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ರಫೀಕ್ ನಂಜೆ 108 ಮತಗಳನ್ನು ಪಡೆದುಕೊಂಡಿದ್ದಾರೆ. 11 ಮತ ತಿರಸ್ಕೃತಗೊಂಡಿದೆ.
ಅರಿಯಡ್ಕ ಗ್ರಾ.ಪಂನ ಮಾಡೂರು 2ನೇ ವಾರ್ಡ್ ಪ.ಜಾತಿಗೆ ಮೀಸಲಿರಿಸಿದ ಸ್ಥಾನದಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಶಂಕರ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ವಿನಯ ಕುಮಾರ್ 433 ಮತ ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಹರೀಶ್ ಎ.ಕೆ 289 ಮತ ಪಡೆದುಕೊಂಡಿದ್ದಾರೆ. 10 ಮತ ತಿರಸ್ಕೃತಗೊಂಡಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!