
ಪುತ್ತೂರು:ಬಿಎಂಎಸ್ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಪುರುಷರಕಟ್ಟೆ ಘಟಕದ 2024-25ನೇಸಾಲಿನ ಅಧ್ಯಕ್ಷರಾಗಿ ರಾಧಾಕೃಷ್ಣಪಾಣಂಬು, ಕಾರ್ಯದರ್ಶಿಯಾಗಿ ಶ್ರೀಧರ ಆಚಾರ್ಯ ಪುರುಷರಕಟ್ಟೆ ಹಾಗೂ ಗೌರವಾಧ್ಯಕ್ಷರಾಗಿ ಬೇಬಿ ಜಾನ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮೋನಪ್ಪ ಪೇರಡ್ಕ, ಜತೆ ಕಾರ್ಯದರ್ಶಿಯಾಗಿ ಸತೀಶ್ ಆನಡ್ಕ, ಕೋಶಾಧಿಕಾರಿಯಾಗಿ ಪದ್ಮನಾಭ ಗೌಡ ಶಾಂತಿಗೋಡು, ಗೌರವ ಸಲಹೆಗಾರರಾಗಿ ಲಕ್ಷ್ಮಣ ಗೌಡ ಹಾಗೂ ವೀರಪ್ಪ ಪೂಜಾರಿಯವರನ್ನು ಆಯ್ಕೆ ಮಾಡಲಾಯಿತು. ಸಂಘದ ನಿಕಟಪೂರ್ವ ಅಧ್ಯಕ್ಷಮಾದಪ್ಪ ಹಾಗೂ ಗೌರವಾಧ್ಯಕ್ಷ ಬೇಬಿಜಾನ್‌ರವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.






